ಶೂಟಿಂಗ್
ಝೂಲ್ (ಜರ್ಮನಿ): ಭಾರತದ ಶಾಂಭವಿ ಕ್ಷೀರಸಾಗರ್ ಮತ್ತು ಓಜಸ್ವಿ ಠಾಕೂರ್ ಅವರು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌ನ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದರು.
ಇದರೊಂದಿಗೆ ಭಾರತವು ಎರಡು ಚಿನ್ನ, ಮೂರು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳೊಂದಿಗೆ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಪಡೆಯಿತು.
ಫೈನಲ್‌ನಲ್ಲಿ ಶಾಂಭವಿ 253.0 ಅಂಕ ಗಳಿಸಿ ಅಗ್ರಸ್ಥಾನ ಪಡೆದರು. ಓಜಸ್ವಿ 1.2 ಅಂಕಗಳಿಂದ ಚಿನ್ನದ ಪದಕ ತಪ್ಪಿಸಿಕೊಂಡರು. ಇಟಲಿಯ ಕಾರ್ಲೋಟಾ ಸಲಾಫಿಯಾ ಕಂಚು ಗೆದ್ದರು.
ಪ್ರಣವ್‌ಗೆ ಕಂಚು: ಹದಿಹರೆಯದ ಸ್ಪರ್ಧಿ ನಾರಾಯಣ್ ಪ್ರಣವ್ ಪುರುಷರ 10 ಮೀ. ಏರ್ ರೈಫಲ್‌ನಲ್ಲಿ ಶನಿವಾರ ಕಂಚಿನ ಪದಕ ಗೆದ್ದುಕೊಂಡರು.
ಖೇಲೊ ಇಂಡಿಯಾ ಯೂತ್ ಗೇಮ್ಸ್ ಚಾಂಪಿಯನ್ ಆಗಿರುವ ಪ್ರಣವ್ ಫೈನಲ್‌ನಲ್ಲಿ 227.9 ಪಾಯಿಂಟ್ಸ್ ಕಲೆಹಾಕಿದರು. ಅಮೆರಿಕದ ಬ್ರಾಡನ್ ಪೀಸರ್ (250.0) ಬೆಳ್ಳಿ ಗೆದ್ದರೆ, ಚೀನಾದ ಹುವಾಂಗ್ ಲಿವಾನ್ಲಿನ್ (250.3) ಚಿನ್ನದ ಪದಕ ತಮ್ಮದಾಗಿಸಿಕೊಂಡರು.
ಮುಕೇಶ್‌ಗೆ ಕಂಚು: ಭಾರತದ ಮುಕೇಶ್ ನೆಲವಳ್ಳಿ ಅವರು ಪುರುಷರ 25 ಮೀಟರ್ ರ‍್ಯಾಪಿಡ್-ಫೈರ್ ಪಿಸ್ತೂಲ್‌ನಲ್ಲಿ ಕಂಚು ಗೆದ್ದರು. ಫ್ರಾನ್ಸ್‌ನ ಥಾಮಸ್ ಚಿನೋರ್ಸ್ ಮತ್ತು ಪೋಲೆಂಡ್‌ನ ಲುಕಾಸ್ಜ್ ಕೊಪಿವೊಡಾ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.