ADVERTISEMENT

ಬ್ಯಾಡ್ಮಿಂಟನ್‌: ಅನ್ಸಲ್ ಯಾದವ್‌ ಬೋಧಿತ್‌ ಜೋಶಿಗೆ ಜಯ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 19:38 IST
Last Updated 25 ಏಪ್ರಿಲ್ 2019, 19:38 IST

ಬೆಂಗಳೂರು: ಅಗ್ರ ಶ್ರೇಯಾಂಕಿತ, ಉತ್ತರ ಪ್ರದೇಶದ ಅನ್ಸಲ್ ಯಾದವ್‌ ಅಖಿಲ ಭಾರತ ಸೀನಿಯರ್‌ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್ ಟೂರ್ನಿಯ ಎರಡನೇ ಸುತ್ತು ಪ್ರವೇಶಿಸಿದರು.

ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಯ ಆವರಣದಲ್ಲಿ ನಡೆಯುತ್ತಿರುವ ಟೂರ್ನಿಯ ಗುರುವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಅವರು ಉತ್ತರಾಖಂಡದ ಧ್ರುವ್ ರಾವತ್‌ ಎದುರು 21–15, 21–16ರಲ್ಲಿ ಗೆದ್ದರು.

ಮೂರನೇ ಶ್ರೇಯಾಂಕದ ಬೋಧಿತ್ ಜೋಶಿ ಕೂಡ ಮೊದಲ ಸುತ್ತಿನಲ್ಲಿ ಗೆದ್ದರು. ಅವರು ಅನಿರುದ್ಧ ಎದುರು 21–17, 21–9ರಲ್ಲಿ ಜಯಿಸಿದರು. ಚಿರಾಗ್ ಸೇನ್ 21–19, 21–08ರಲ್ಲಿ ಹಿಮಾಂಶು ತಿವಾರಿ ಅವರನ್ನು ಮಣಿಸಿದರು. ರಾಜ್ಯದ ಆಟಗಾರ, ಆರನೇ ಶ್ರೇಯಾಂಕಿತ ನಿಕಿಲ್ ಶ್ಯಾಂ ಶ್ರೀರಾಮ್‌ ಹರಿಯಾಣದ ಎ.ಎಸ್‌.ಜಿಂದಾಲ್ ವಿರುದ್ಧ 13–21, 16–21ರಲ್ಲಿ ಸೋತು ಹೊರಬಿದ್ದರು.

ADVERTISEMENT

ಮಹಿಳೆಯರ ಸಿಂಗಲ್ಸ್‌ನಲ್ಲಿ ಶ್ರೀಯಾಂಶಿ ಪರದೇಶಿ ಗಾಯದ ಸಮಸ್ಯೆಯಿಂದಾಗಿ ಕಣಕ್ಕೆ ಇಳಿಯಲಿಲ್ಲ. ಎರಡನೇ ಶ್ರೇಯಾಂಕಿತ ಕನಿಕ ಕನ್ವಲ್‌ 21–7, 21–11ರಲ್ಲಿ ರಿಯಾ ಘೋಷ್‌ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.