ADVERTISEMENT

‘ರಾಷ್ಟ್ರೀಯ ಶಿಬಿರಗಳು ಮುಂದಕ್ಕೆ’

ಕೋವಿಡ್‌–19 ಭೀತಿ: ಒಲಿಂಪಿಕ್ಸ್‌ ಸಿದ್ಧತೆ ಮುಂದುವರಿಕೆ

ಪಿಟಿಐ
Published 17 ಮಾರ್ಚ್ 2020, 19:26 IST
Last Updated 17 ಮಾರ್ಚ್ 2020, 19:26 IST
ಕಿರಣ್‌ ರಿಜಿಜು
ಕಿರಣ್‌ ರಿಜಿಜು   

ನವದೆಹಲಿ: ಕೋವಿಡ್‌–19 ಪಿಡುಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಕಾರಣ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುತ್ತಿರುವ ಅಥ್ಲೀಟ್‌ಗಳ ಕೇಂದ್ರಗಳನ್ನು ಹೊರತುಪಡಿಸಿ ಎಲ್ಲ ರಾಷ್ಟ್ರೀಯ ಶಿಬಿರಗಳನ್ನು ಮಂಗಳವಾರ ಮುಂದೂಡಲಾಗಿದೆ. ಈ ಶಿಬಿರಗಳಲ್ಲಿ ತರಬೇತಿಯಲ್ಲಿದ್ದ ಅಥ್ಲೀಟ್‌ಗಳನ್ನು ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಮಾಡುತ್ತಿದೆ.

‘ಎಲ್ಲ ರಾಷ್ಟ್ರೀಯ ಶಿಬಿರಗಳನ್ನು ಮುಂದೂಡಲಾಗಿದೆ. ಟೋಕಿಯೊ ಒಲಿಂಪಿಕ್ಸ್‌ ಭಾಗವಾಗಿಅಥ್ಲೀಟ್‌ಗಳು ಪಡೆಯುತ್ತಿರುವ ತರಬೇತಿ ಕೇಂದ್ರಗಳಿಗೆ ಇದು ಅನ್ವಯವಾಗುವುದಿಲ್ಲ. ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರ ಹಾಗೂ ಸಾಯ್‌ ಕೇಂದ್ರಗಳಲ್ಲಿ ನಡೆಸುವ ಅಕಾಡೆ ಮಿಕ್‌ ತರಬೇತಿಯನ್ನು ಮುಂದಿನ ಸೂಚನೆಯವರೆಗೆ ರದ್ದು ಮಾಡಲಾಗಿದೆ’ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಟ್ವೀಟ್‌ ಮಾಡಿದ್ದಾರೆ.

‘ಇದು ತಾತ್ಕಾಲಿಕ ಮತ್ತು ಮುನ್ನೆಚ್ಚರಿಕಾ ಕ್ರಮವಾಗಿದ್ದು, ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದರೆ ತರಬೇತಿ ಮುಂದುವರಿಸಲಾಗುವುದು’ ಎಂದೂ ರಿಜಿಜು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.