ADVERTISEMENT

ರಾಷ್ಟ್ರೀಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌: ಕರ್ನಾಟಕದ ಸಿದ್ಧಾಂತ್‌ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 16:09 IST
Last Updated 15 ಆಗಸ್ಟ್ 2025, 16:09 IST
ಪ್ರಶಸ್ತಿಯೊಂದಿಗೆ ಸಿದ್ಧಾಂತ್‌ ಎಂ.
ಪ್ರಶಸ್ತಿಯೊಂದಿಗೆ ಸಿದ್ಧಾಂತ್‌ ಎಂ.   

ಬೆಂಗಳೂರು: ಕರ್ನಾಟಕದ ಸಿದ್ಧಾಂತ್‌ ಅವರು ಗುಜರಾತ್‌ನ ವಡೋದರಾದಲ್ಲಿ ನಡೆದ ರಾಷ್ಟ್ರೀಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ 13 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ ಪ್ರಶಸ್ತಿ ಮುಡಿಗೇರಿಸಿಕೊಂಡರು. 

ಸಿದ್ಧಾಂತ್‌ ಫೈನಲ್‌ನಲ್ಲಿ 11-9, 12-10, 11-7ರಿಂದ ಪಶ್ಚಿಮ ಬಂಗಾಳದ ರಾಜ್‌ದೀಪ್‌ ಬಿಸ್ವಾಸ್‌ ಅವರನ್ನು ಮಣಿಸಿದರು. ಸೆಮಿಫೈನಲ್‌ನಲ್ಲಿ ಸಿದ್ಧಾಂತ್‌ 11-3, 11-6, 7-11, 13-11ರಿಂದ ಪಶ್ಚಿಮ ಬಂಗಾಳದ ಮತ್ತೊಬ್ಬ ಆಟಗಾರ ಜೆಮ್‌ ಮಹಾಲನಾಬಿಷ್ ಅವರನ್ನು ಸೋಲಿಸಿದ್ದರು. 

11 ವರ್ಷದೊಳಗಿನ ಸಿಂಗಲ್ಸ್‌ನಲ್ಲಿ ಕರ್ನಾಟಕದ ಅರ್ಣವ್‌ ಮಿಥುನ್‌ ಮತ್ತು ಸಾಕ್ಷ್ಯಾ ಸಂತೋಷ್‌ ರನ್ನರ್ಸ್‌ ಅಪ್‌ ಆದರು. ಬಾಲಕರ ವಿಭಾಗದ ಫೈನಲ್‌ನಲ್ಲಿ ರಾಜ್‌ದೀಪ್‌ 11-8, 6-11, 11-3, 9-11, 11-6ರಿಂದ ಅರ್ಣವ್‌ ಅವರನ್ನು ಮಣಿಸಿದರು. ಸೆಮಿಫೈನಲ್‌ನಲ್ಲಿ ಅರ್ಣವ್‌ 11-5, 11-8, 11-8ರಿಂದ ತಮ್ಮದೇ ರಾಜ್ಯದ ಶರ್ವಿಲ್ ಕರಂಬ್ಳೆಕರ್ ಅವರನ್ನು ಸೋಲಿಸಿದ್ದರು. 

ADVERTISEMENT

ಬಾಲಕಿಯರ ಫೈನಲ್‌ನಲ್ಲಿ ಮಹಾರಾಷ್ಟ್ರದ ಆದ್ಯಾ ಬಹೇತಿ 11-4, 9-11, 11-7, 13-11ರಿಂದ ಸಾಕ್ಷ್ಯಾ ಅವರನ್ನು ಮಣಿಸಿದರು. ಸೆಮಿಫೈನಲ್‌ನಲ್ಲಿ ಸಾಕ್ಷ್ಯಾ 8-11, 11-8, 11-3, 11-8ರಿಂದ ಉತ್ತರ ಪ್ರದೇಶದ ಅಂಶಿಕಾ ಗುಪ್ತಾ ಅವರನ್ನು ಹಿಮ್ಮೆಟ್ಟಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.