ADVERTISEMENT

ವಿನೇಶಾ, ಸಾಕ್ಷಿ ಆಕರ್ಷಣೆ

ರಾಷ್ಟ್ರೀಯ ಸೀನಿಯರ್‌ ಕುಸ್ತಿ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2019, 20:14 IST
Last Updated 26 ನವೆಂಬರ್ 2019, 20:14 IST
ಸಾಕ್ಷಿ ಮಲಿಕ್‌ (ಎಡ) ಮತ್ತು ವಿನೇಶಾ ಪೋಗಟ್‌
ಸಾಕ್ಷಿ ಮಲಿಕ್‌ (ಎಡ) ಮತ್ತು ವಿನೇಶಾ ಪೋಗಟ್‌   

ಜಲಂಧರ್‌ (ಪಿಟಿಐ): ವಿನೇಶಾ ಪೋಗಟ್‌ ಮತ್ತು ಸಾಕ್ಷಿ ಮಲಿಕ್‌ ಅವರು ಇದೇ ತಿಂಗಳ 29ರಿಂದ ಡಿಸೆಂಬರ್‌ 1ರವರೆಗೆ ಇಲ್ಲಿ ನಡೆಯುವ ರಾಷ್ಟ್ರೀಯ ಸೀನಿಯರ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆಲ್ಲುವ ಕನಸಿನೊಂದಿಗೆ ಕಣಕ್ಕಿಳಿಯಲಿದ್ದಾರೆ.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿರುವ ವಿನೇಶಾ ಮತ್ತು 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕದ ಸಾಧನೆ ಮಾಡಿದ್ದ ಸಾಕ್ಷಿ ಅವರು ಕ್ರಮವಾಗಿ 55 ಮತ್ತು 62 ಕೆ.ಜಿ. ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ.

ದಿವ್ಯಾ ಕಕ್ರಾನ್‌ (68 ಕೆ.ಜಿ.), ಸೀಮಾ ಬಿಸ್ಲಾ (50 ಕೆ.ಜಿ), ಸರಿತಾ ಮೋರೆ (57 ಕೆ.ಜಿ) ಮತ್ತು ನವಜ್ಯೋತ್‌ ಕೌರ್‌ (65 ಕೆ.ಜಿ) ಅವರೂ ಅಖಾಡಕ್ಕೆ ಇಳಿಯಲಿದ್ದಾರೆ.

ADVERTISEMENT

ಪುರುಷರ ಫ್ರೀಸ್ಟೈಲ್‌, ಗ್ರೀಕೊ ರೋಮನ್‌ ಮತ್ತು ಮಹಿಳಾ ವಿಭಾಗದಲ್ಲಿ ನಡೆಯುವ ಚಾಂಪಿಯನ್‌ಷಿಪ್‌ನಲ್ಲಿ 500ಕ್ಕೂ ಅಧಿಕ ಕುಸ್ತಿಪಟುಗಳು ಭಾಗವಹಿಸಲಿದ್ದಾರೆ.

ಪುರುಷರ ವಿಭಾಗದಲ್ಲಿ ಸಾಜನ್‌ (77 ಕೆ.ಜಿ), ಗೌರವ್‌ ಬಲಿಯಾನ್‌ (74 ಕೆ.ಜಿ), ಸುಮಿತ್‌ ಮಲಿಕ್‌ (125 ಕೆ.ಜಿ), ಸತ್ಯವರ್ತ್‌ ಕಡಿಯಾನ್‌ (97 ಕೆ.ಜಿ) ಮತ್ತು ರಾಹುಲ್‌ ಮಾನ್‌ (70 ಕೆ.ಜಿ) ಅವರು ಅಭಿಮಾನಿಗಳ ಆಕರ್ಷಣೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.