ADVERTISEMENT

ವಿಡಿಯೊ | ಒಂದೇ ಪಂಚ್‌ಗೆ ಪ್ರಜ್ಞೆ ತಪ್ಪಿದ ಎದುರಾಳಿ: ವೈಲ್ಡರ್‌ಗೆ ಸತತ 43ನೇ ಜಯ

ಏಜೆನ್ಸೀಸ್
Published 25 ನವೆಂಬರ್ 2019, 6:55 IST
Last Updated 25 ನವೆಂಬರ್ 2019, 6:55 IST
   

ಲಾಸ್‌ ವೆಗಾಸ್‌(ನವೆಡಾ, ಅಮೆರಿಕ): ವಿಶ್ವಹೆವಿವೆಯ್ಟ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ ಹಣಾಹಣಿಯಲ್ಲಿ ಕ್ಯೂಬಾದ ಲೂಯಿಸ್‌ ಔರಿಟ್ಜ್‌ ಅವರಿಗೆ ಪ್ರಜ್ಞೆ ತಪ್ಪುವಂತೆ ಪಂಚ್‌ ಮಾಡಿದಯುಎಸ್‌ ಬಾಕ್ಸರ್‌ ಡಿಯೋಂಟೇ ವೈಲ್ಡರ್‌, ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಇಲ್ಲಿನ ಎಂಜಿಎಂ ಗ್ರಾಂಡ್‌ ಹೊಟೇಲ್‌ನಲ್ಲಿ ನಡೆದ ಈ ಸೆಣಸಾಟದಲ್ಲಿಔರಿಟ್ಜ್‌ ಎದುರು ಗೆಲ್ಲಲುವೈಲ್ಡರ್‌ ಸಾಕಷ್ಟು ಕಸರತ್ತು ನಡೆಸಿದರಾದರೂ, ಏಳನೇ ಸುತ್ತಿನವೆರಗೂ ಜಯ ಸಾಧ್ಯವಾಗಲಿಲ್ಲ. ಆದರೆ ಎಂಟನೇ ಸುತ್ತಿನಲ್ಲಿ ಹೊಂಚುಹಾಕಿ ಹೊಡೆದ ಆ ಒಂದೇಒಂದು ಪಂಚ್‌ ಅವರ ಗೆಲುವನ್ನು ಖಾತ್ರಿ ಪಡಿಸಿತು.

ಎಡಗೈಯನ್ನು ಎದುರಾಳಿಯ ಮುಖದ ಬಳಿಗೆ ತಂದು ದಿಕ್ಕು ತಪ್ಪಿಸಿದವೈಲ್ಡರ್‌, ಅವರ ಹಣೆಯ ಭಾಗಕ್ಕೆ ಬಲಗೈನಿಂದ ಬಲವಾಗಿ ಗುದ್ದಿದರು. ಹೊಡೆತದಿಂದ ತತ್ತರಿಸಿದ ಔರಿಟ್ಞ್‌ ಪ್ರಜ್ಞೆ ತಪ್ಪಿದರು. ಇದನ್ನು ಗಮನಿಸಿದ ರೆಫ್ರಿಗಳು ಪಂದ್ಯವನ್ನು ಮುಕ್ತಾಯಗೊಳಿಸಿದರು.

ADVERTISEMENT

ಇದುವರೆಗೆ ಆಡಿರುವ ಒಟ್ಟು 43 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಅಜೇಯವಾಗಿ ಮುಂದುವರಿದಿರುವ ವೈಲ್ಡರ್‌, ವಿಶ್ವ ಬಾಕ್ಸಿಂಗ್‌ ಮಂಡಳಿಯ ಈ ಪ್ರಶಸ್ತಿಯನ್ನು ಸತತ ಹತ್ತನೇ ಬಾರಿಯೂ ತಮ್ಮಲ್ಲೇ ಉಳಿಸಿಕೊಂಡರು.

ಮಾಜಿ ವಿಶ್ವ ಚಾಂಪಿಯನ್‌ಗಳಾದ ಮೈಕ್‌ ಟೈಸನ್‌ ಹಾಗೂಫ್ಲಾಯ್ಡ್ ಮೇವೆದರ್ ಅವರೂ ಈ ಪಂದ್ಯ ವೀಕ್ಷಿಸಿದರು.

ಪಂದ್ಯದ ಬಳಿಕ ಮಾತನಾಡಿರುವ ವೈಲ್ಡರ್‌, ‘ಆ ಪಂಚ್‌ ಬಳಿಕ ಔರಿಟ್ಜ್‌ ಮಗುವಿನಂತೆ ಮಲಗಿ ಬಿಟ್ಟರು’ ಎಂದು ಹೇಳಿಕೆ ನೀಡಿದರು.

‘ಆ ಹೊಡೆತ ಭಾರಿಸಿದ ಸಂದರ್ಭ ನನ್ನ ಪಾದ ಹಾಗೂ ಬಲಗೈ ಚಲನೆ ಸರಿಯಾಗಿತ್ತು. ಅದರಿಂದ(ಪಂಚ್‌ನಿಂದ) ತೀವ್ರವಾಗಿ ಪೆಟ್ಟು ಬಿದ್ದಿದೆ ಎಂಬುದು ಆಗಲೇ ಅರಿವಾಯಿತು’ ಎಂದೂ ತಿಳಿಸಿದರು.

ಅಂದಹಾಗೆ ವೈಲ್ಡರ್‌ 2020ರ ಫೆಬ್ರವರಿಯಲ್ಲಿ ನಡೆಯುವ ತಮ್ಮಮುಂದಿನ ಪಂದ್ಯದಲ್ಲಿ ಇಂಗ್ಲೆಂಡಿನ ಟೈಸನ್‌ ಫ್ಯೂರಿ ಎದುರು ಸೆಣಸಲಿದ್ದಾರೆ. ಒಂದು ವೇಳೆ ಆ ಪಂದ್ಯದಲ್ಲಿಯೂ ಗೆದ್ದರೆ, ಇಂಗ್ಲೆಂಡಿನ ಅಂಥೋನಿ ಜೋಶುವ ಹಾಗೂ ಯುಎಸ್‌ನ ಆ್ಯಂಡಿ ರುಯಿಜ್‌ ನಡುವಣಮುಂದಿನ ತಿಂಗಳು ಸೌದಿ ಅರೇಬಿಯಾದಲ್ಲಿ ನಡೆಯುವಪಂದ್ಯದಲ್ಲಿ ಗೆದ್ದವರ ವಿರುದ್ಧ ಕಣಕ್ಕಿಳಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.