ADVERTISEMENT

ನೆಟ್‌ಬಾಲ್: ಮೇಘನಾ ಉಪನಾಯಕಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 19:32 IST
Last Updated 29 ಆಗಸ್ಟ್ 2022, 19:32 IST
ಮೇಘನಾ
ಮೇಘನಾ   

ಗೋಣಿಕೊಪ್ಪಲು (ಕೊಡಗು ಜಿಲ್ಲೆ): ಸಿಂಗಪುರದಲ್ಲಿ ಸೆ. 3ರಿಂದ ನಡೆಯಲಿರುವ ಏಷ್ಯನ್ ನೆಟ್‌ಬಾಲ್ ಟೂರ್ನಿಗೆ ಭಾರತೀಯ ತಂಡದ ಉಪನಾಯಕಿಯಾಗಿ ಬಿ.ಸಿ. ಮೇಘನಾ ಆಯ್ಕೆಯಾಗಿದ್ದಾರೆ.

ಗೋಣಿಕೊಪ್ಪಲಿನ ನಿವಾಸಿ ಬಿ.ಎ. ಚನ್ನಪ್ಪ ಪೂಜಾರಿ, ಬಿ.ಸಿ.ನಳಿನಾಕ್ಷಿ ದಂಪತಿ ಪುತ್ರಿಯಾಗಿರುವ ಮೇಘನಾ, ಉಜಿರೆಯ ಎಸ್‌ಡಿಎಂ ವಿದ್ಯಾ ಸಂಸ್ಥೆಯಲ್ಲಿ ಎಂ.ಕಾಂ ಮೊದಲ ವರ್ಷದಲ್ಲಿ ಓದುತ್ತಿದ್ದಾರೆ.ತೆಲಂಗಾಣ, ತಮಿಳುನಾಡು, ಹರಿಯಾಣ, ಹಿಮಾಚಲ ಪ್ರದೇಶ, ಛತ್ತೀಸಗಡದಲ್ಲಿ ನಡೆದ ನೆಟ್‌ಬಾಲ್ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಅವರು ಪ್ರತಿನಿಧಿಸಿದ್ದರು.

ರಮೇಶ್ ರಚ್, ಸುದೀನ ಪೂಜಾರಿ, ನಿತಿನ್ ಪೂಜಾರಿ, ಶಾರದಾ ಬರ್ಕೋರ್, ಮೇಘನಾ ಅವರ ತರಬೇತುದಾರರಾಗಿದ್ದಾರೆ. ಗಿರೀಶ್ ರಾಷ್ಟ್ರೀಯ ತಂಡದ ತರಬೇತುದಾರರೂ ಹೌದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.