ADVERTISEMENT

ಭಾರತ ತಂಡದಲ್ಲಿ ರಾಜ್ಯದ ದೀಪಾ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 19:30 IST
Last Updated 28 ಜೂನ್ 2019, 19:30 IST
ದೀಪಾ ತಿರುಮಲ ರಾವ್‌
ದೀಪಾ ತಿರುಮಲ ರಾವ್‌   

ಬೆಂಗಳೂರು: ಕರ್ನಾಟಕದ ಪ್ರತಿಭಾನ್ವಿತ ಆಟಗಾರ್ತಿ ದೀಪಾ ತಿರುಮಲ ರಾವ್‌ ಅವರು ಶುಕ್ರವಾರ ಏಷ್ಯನ್‌ ಯೂತ್‌ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌ಗೆ (21ವರ್ಷದೊಳಗಿನವರು) ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಜೂನ್‌ 29ರಿಂದ ಜುಲೈ ಏಳರವರೆಗೆ ಜಪಾನ್‌ನ ಕಶಿಮಾದಲ್ಲಿ ಚಾಂಪಿಯನ್‌ಷಿಪ್‌ ಆಯೋಜನೆಯಾಗಿದೆ.

ದೀಪಾ ಅವರು ಸೌತ್‌ ಎಂಡ್‌ ವೃತ್ತದಲ್ಲಿರುವ ಸುರಾನ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ. ರಾಷ್ಟ್ರೀಯ ಮುಕ್ತ ಟೂರ್ನಿಯಲ್ಲಿ ಹತ್ತಕ್ಕೂ ಹೆಚ್ಚು ಬಾರಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ.

ADVERTISEMENT

ತಂಡ ಇಂತಿದೆ: ಪಲ್ಲವಿ ಕುಮಾರಿ (ನಾಯಕಿ), ಪ್ರಾಚಿ (ಉಪ ನಾಯಕಿ), ಅಪರ್ಣ ಚೌಹಾಣ್‌, ವಂಶಿಕಾ, ದೀಪಾ ತಿರುಮಲ ರಾವ್‌, ಅಂಜಲಿ ಕುಮಾರಿ, ರಿತಿಕಾ, ರುದ್ರಿಕ ರಾವತ್‌, ಸ್ನೇಹಾ ಭುಕರ್‌, ಪಲ್ಲವಿ ರಾಣಾ, ಅರ್ಷನೂರ್‌ ಸಿಂಧು ಮತ್ತು ಅಮನದೀಪ್‌ ಕೌರ್‌.

ಮುಖ್ಯ ಕೋಚ್‌: ದೀಪಕ್‌ ಅತ್ರಿ, ಸಹಾಯಕ ಕೋಚ್‌: ವಿಭಾ ಕುಮಾರಿ, ಮ್ಯಾನೇಜರ್‌: ಅಶೋಕ್‌ ಕುಮಾರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.