ADVERTISEMENT

ವಿಶ್ವ ಚೆಸ್‌: ಕಾರ್ಲ್‌ಸನ್‌ ಚಾಂಪಿಯನ್‌

ಏಜೆನ್ಸೀಸ್
Published 11 ಡಿಸೆಂಬರ್ 2021, 2:57 IST
Last Updated 11 ಡಿಸೆಂಬರ್ 2021, 2:57 IST
ಮ್ಯಾಗ್ನಸ್‌ ಕಾರ್ಲ್‌ಸನ್‌– ಎಪಿ ಚಿತ್ರ
ಮ್ಯಾಗ್ನಸ್‌ ಕಾರ್ಲ್‌ಸನ್‌– ಎಪಿ ಚಿತ್ರ   

ದುಬೈ: ನಾರ್ವೆಯ ಗ್ರ್ಯಾಂಡ್‌ಮಾಸ್ಟರ್‌ ಮ್ಯಾಗ್ನಸ್‌ ಕಾರ್ಲ್‌ಸನ್ ಅವರು ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.

ಶುಕ್ರವಾರ ಕಾರ್ಲ್‌ಸನ್‌ ರಷ್ಯಾದ ಇಯಾನ್‌ ಇಯಾನ್‌ ನಿಪೋಮ್‌ನಿಶಿ ಸವಾಲು ಮೀರಿದರು. 14 ಗೇಮ್‌ಗಳ ಪಂದ್ಯದ 11ನೇ ಗೇಮ್‌ನಲ್ಲಿ ಕಾರ್ಲ್‌ಸನ್ ಜಯ ಸಾಧಿಸಿದರು. ಇದು ಅವರಿಗೆ 4ನೇ ಜಯವಾಗಿತ್ತು. ಈ ಗೇಮ್‌ನಲ್ಲಿ ಅವರು ಕಪ್ಪು ಕಾಯಿಗಳೊಂದಿಗೆ ಆಡಿದ್ದರು.

ಪಂದ್ಯದಲ್ಲಿ ಕಾರ್ಲಸನ್‌ 7.5 ಪಾಯಿಂಟ್ಸ್ ಗಳಿಸಿದರೆ ನಿಪೋಮ್‌ನಿಶಿ ಅವರಿಗೆ 3.5 ಪಾಯಿಂಟ್ಸ್ ಕಲೆಹಾ ಕಲಷ್ಟೇ ಸಾಧ್ಯವಾಯಿತು. 31 ವರ್ಷದ ನಾರ್ವೆ ಆಟಗಾರನಿಗೆ ಇದು ಸತತ ಐದನೇ ಪ್ರಶಸ್ತಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.