ADVERTISEMENT

ಕ್ರೀಡಾಂಗಣದಲ್ಲಿ ಪಾಕ್ ಸೇನೆ ತಾಲೀಮು

ಪಿಟಿಐ
Published 7 ಮಾರ್ಚ್ 2019, 18:51 IST
Last Updated 7 ಮಾರ್ಚ್ 2019, 18:51 IST
ಕರಾಚಿ ಕ್ರೀಡಾಂಗಣದಲ್ಲಿ ಭದ್ರತಾ ಪಡೆಗಳ ತಾಲೀಮು –ಎಎಫ್‌ಪಿ ಚಿತ್ರ
ಕರಾಚಿ ಕ್ರೀಡಾಂಗಣದಲ್ಲಿ ಭದ್ರತಾ ಪಡೆಗಳ ತಾಲೀಮು –ಎಎಫ್‌ಪಿ ಚಿತ್ರ   

ಕರಾಚಿ: ಇದೇ 9ರಿಂದ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಟೂರ್ನಿಯ ಪಂದ್ಯಗಳು ನಡೆಯಲಿರುವ ಇಲ್ಲಿಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭದ್ರತಾ ವ್ಯವಸ್ಥೆ ಕೈಗೊಂಡಿರುವ ಪಾಕಿಸ್ತಾನ ಸೇನೆಯು ಗುರುವಾರ ತಾಲೀಮು ನಡೆಸಿತು.

ಭಯೋತ್ಪಾದನೆ ದಾಳಿಯ ಭೀತಿಯ ಹಿನ್ನೆಲೆಯಲ್ಲಿ ಈ ಸೇನೆಯು ಕಟ್ಟೆಚ್ಚರ ವಹಿಸಿದೆ. ಆದ್ದರಿಂದ ಎಲ್ಲ ಹಂತದ ಭದ್ರತಾ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಗುರುವಾರ ಸೇನಾಪಡೆಯು ಪೆರೆಡ್ ನಡೆಸಿತು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತಿಳಿಸಿದೆ.

ಟೂರ್ನಿಯ ಮೊದಲ ಹಂತದ ಪಂದ್ಯಗಳು ಅಬುಧಾಬಿಯಲ್ಲಿ ನಡೆದಿವೆ. ಇದೇ ಎರಡನೇ ಹಂತದ ಲೀಗ್ ಪಂದ್ಯಗಳು, ನಾಕೌಟ್ ಪಂದ್ಯಗಳು ಕರಾಚೆಯಲ್ಲಿ ನಡೆಯಲಿವೆ.

ADVERTISEMENT

ಹತ್ತು ವರ್ಷಗಳ ಹಿಂದೆ ಲಾಹೋರ್‌ನಲ್ಲಿ ಟೆಸ್ಟ್ ಪಂದ್ಯದಲ್ಲಿ ಆಡಿದ್ದ ಶ್ರೀಲಂಕಾ ತಂಡದ ಬಸ್‌ ಮೇಲೆ ಭಯೋತ್ಸಾದನೆ ದಾಳಿ ನಡೆದಿತ್ತು. ಆಗಿನಿಂದಲೂ ಪಾಕ್‌ ಕ್ರಿಕೆಟ್‌ ತಂಡವು ಅಬುಧಾಬಿಯನ್ನು ತನ್ನ ತವರಿನ ಕ್ರೀಡಾಂಗಣ ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.