ADVERTISEMENT

ಪಿಬಿಎಲ್‌: ಹಂಟರ್ಸ್‌ಗೆ ಮಣಿದ ಸ್ಮ್ಯಾಷರ್ಸ್‌

ಪಿಟಿಐ
Published 25 ಡಿಸೆಂಬರ್ 2018, 19:18 IST
Last Updated 25 ಡಿಸೆಂಬರ್ 2018, 19:18 IST

ಹೈದರಾಬಾದ್‌: ಹೈದರಾಬಾದ್‌ ಹಂಟರ್ಸ್‌ ತಂಡದವರು ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ನ (ಪಿಬಿಎಲ್‌) ಪಂದ್ಯದಲ್ಲಿ ಗೆದ್ದಿದ್ದಾರೆ.

ಗಚಿಬೌಲಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಹಣಾಹಣಿಯಲ್ಲಿ ಹಂಟರ್ಸ್‌ 5–0ಯಿಂದ ಚೆನ್ನೈ ಸ್ಮ್ಯಾಷರ್ಸ್‌ ತಂಡವನ್ನು ಪರಾಭವಗೊಳಿಸಿತು.

ಮಹಿಳೆಯರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಹಂಟರ್ಸ್‌ ತಂಡದ ಪಿ.ವಿ.ಸಿಂಧು 13–15, 15–14, 7–15ರಲ್ಲಿ ಸಂಗ್‌ ಜಿ ಹ್ಯೂನ್‌ ಎದುರು ಸೋತರು.

ADVERTISEMENT

ಪುರುಷರ ಡಬಲ್ಸ್‌ ವಿಭಾಗದ ‘ಟ್ರಂಪ್‌’ ‍ಪಂದ್ಯದಲ್ಲಿ ಬೊಡಿನ್‌ ಇಸಾರ ಮತ್ತು ಕಿಮ್‌ ಸಾ ರ‍್ಯಾಂಗ್‌ 13–15, 15–12, 15–10ರಲ್ಲಿ ಚೆನ್ನೈ ತಂಡದ ಒರ್‌ ಚಿನ್‌ ಚುಂಗ್‌ ಮತ್ತು ಬಿ.ಸುಮೀತ್‌ ರೆಡ್ಡಿ ಅವರನ್ನು ಪರಾಭವಗೊಳಿಸಿ ಹಂಟರ್ಸ್‌ ಖಾತೆಗೆ ಎರಡು ಪಾಯಿಂಟ್ಸ್‌ ಸೇರ್ಪಡೆ ಮಾಡಿದರು.

ಪುರುಷರ ಸಿಂಗಲ್ಸ್‌ ಹಣಾಹಣಿಯಲ್ಲಿ ಲೀ ಹ್ಯೂನ್ ಇಲ್‌ 15–11, 15–13ರಲ್ಲಿ ಚೊಂಗ್‌ ವೀ ಫೆಂಗ್‌ ಅವರನ್ನು ಸೋಲಿಸಿ ಹಂಟರ್ಸ್‌ ತಂಡಕ್ಕೆ 3–1ರ ಮುನ್ನಡೆ ತಂದುಕೊಟ್ಟರು.

ಚೆನ್ನೈ ಪಾಲಿನ ‘ಟ್ರಂಪ್‌’ ಪಂದ್ಯದಲ್ಲಿ ಪರುಪಳ್ಳಿ ಕಶ್ಯಪ್‌ 11–15, 15–14, 13–15ರಲ್ಲಿ ಮಾರ್ಕ್‌ ಕ್ಯಾಲಿಜೊವ್‌ ಎದುರು ನಿರಾಸೆ ಕಂಡರು. ಹೀಗಾಗಿ ಚೆನ್ನೈ ತಂಡ ತನ್ನ ಖಾತೆಯಲ್ಲಿದ್ದ ಒಂದು ಪಾಯಿಂಟ್‌ ಕಳೆದುಕೊಂಡಿತು.

ಮಿಶ್ರ ಡಬಲ್ಸ್‌ ವಿಭಾಗದ ಹೋರಾಟದಲ್ಲಿ ಹಂಟರ್ಸ್‌ ಪರ ಕಣಕ್ಕಿಳಿದಿದ್ದ ಕಿಮ್‌ ಸಾ ರ‍್ಯಾಂಗ್‌ ಮತ್ತು ಎವೊಮ್‌ ಹೈ ವೊನ್‌ 14–15, 15–13, 15–14ರಲ್ಲಿ ಕ್ರಿಸ್ ಮತ್ತು ಗೇಬ್ರಿಯಲ್‌ ಅಡ್‌ಕಾಕ್‌ ಅವರನ್ನು ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.