ಬುಡಾಪೆಸ್ಟ್: ಭಾರತದ ಮಹಿಳಾ ಕುಸ್ತಿಪಟುಗಳು ಇಲ್ಲಿ ನಡೆದ ಯುನೈಟೆಡ್ ವಿಶ್ವ ಕುಸ್ತಿ ರ್‍ಯಾಂಕಿಂಗ್ ಚಾಂಪಿಯನ್‌ಷಿಪ್‌ನಲ್ಲಿ ತಂಡ ಪ್ರಶಸ್ತಿ ಜಯಿಸಿದರು.
ಉದಯೋನ್ಮುಖ ಕುಸ್ತಿಪಟುಗಳಾದ ಪ್ರಿಯಾ ಮಲಿಕ್ ಹಾಗೂ ಮನೀಷಾ ಭಾನ್‌ವಾಲಾ ಅವರು ಶನಿವಾರ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡರು. ಈ ಮೂಲಕ, ಟೂರ್ನಿಯಲ್ಲಿ ಆರು ಪದಕಗಳೊಂದಿಗೆ (ತಲಾ ಎರಡು ಚಿನ್ನ, ಬೆಳ್ಳಿ ಹಾಗೂ ಕಂಚು) ಭಾರತದ ಮಹಿಳಾ ಕುಸ್ತಿಪಟುಗಳು ಪಾರಮ್ಯ ಮೆರೆದರು.
ಮಹಿಳೆಯರ 76 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಪ್ರಿಯಾ ಅವರು ಫೈನಲ್‌ನಲ್ಲಿ ಬ್ರೆಜಿಲ್‌ನ ಥಮೈರಸ್ ಮಾರ್ಟಿನ್ಸ್ ಮಶಾಡೊ ಎದುರು 3–4ರಿಂದ ಪರಾಭವಗೊಂಡರು. ಏಷ್ಯನ್ ಚಾಂಪಿಯನ್ ಮನೀಷಾ ಅವರು 62 ಕೆ.ಜಿ. ವಿಭಾಗದಲ್ಲಿ, ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಬೆಲಾರಸ್‌ನ ಕ್ರಿಸ್ಟಿನಾ ಸಜಿಕಿನಾ ಅವರನ್ನು ಮಣಿಸಿದರು.
ಇದಕ್ಕೂ ಮೊದಲು, ಒಲಿಂಪಿಯನ್ ಅಂತಿಮ್ ಪಂಘಲ್ ಅವರು 53 ಕೆ.ಜಿ. ವಿಭಾಗದಲ್ಲಿ ಹಾಗೂ ಹರ್ಷಿತಾ ಅವರು 72 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು. 57 ಕೆ.ಜಿ. ವಿಭಾಗದಲ್ಲಿ ನೇಹಾ ಸಂಗ್ವಾನ್ ಬೆಳ್ಳಿ ಹಾಗೂ 50 ಕೆ.ಜಿ. ವಿಭಾಗದಲ್ಲಿ ನೀಲಂ ಅವರು ಕಂಚಿನ ಪದಕ ಗೆದ್ದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.