ADVERTISEMENT

ಪುಣೇರಿಗೆ ತಲೈವಾಸ್‌ ಸವಾಲು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 19:46 IST
Last Updated 17 ಸೆಪ್ಟೆಂಬರ್ 2019, 19:46 IST
ಬೆಂಗಳೂರು ಬುಲ್ಸ್ ತಂಡದ ಪ್ರಮುಖ ರೇಡರ್‌ಗಳಾದ ಪವನ್‌ ಶೆರಾವತ್‌ ಮತ್ತು ರೋಹಿತ್‌ ಕುಮಾರ್‌ ಮಂಗಳವಾರ ನಡೆದ ಕಾರ್ಯಕ್ರಮದ ವೇಳೆ ಮಹಾರಾಷ್ಟ್ರದ ಪ್ರಸಿದ್ಧ ತಿನಿಸು ಮಿಸಳ ಪಾವ್ ಸವಿದರು
ಬೆಂಗಳೂರು ಬುಲ್ಸ್ ತಂಡದ ಪ್ರಮುಖ ರೇಡರ್‌ಗಳಾದ ಪವನ್‌ ಶೆರಾವತ್‌ ಮತ್ತು ರೋಹಿತ್‌ ಕುಮಾರ್‌ ಮಂಗಳವಾರ ನಡೆದ ಕಾರ್ಯಕ್ರಮದ ವೇಳೆ ಮಹಾರಾಷ್ಟ್ರದ ಪ್ರಸಿದ್ಧ ತಿನಿಸು ಮಿಸಳ ಪಾವ್ ಸವಿದರು   

ಪುಣೆ: ಈ ಬಾರಿ ತವರಿನ ಅಂಗಳದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಗೆದ್ದು ನಂತರ ಪಟ್ನಾ ಪೈರೇಟ್ಸ್‌ಗೆ ಶರಣಾಗಿದ್ದ ಪುಣೇರಿ ಪಲ್ಟನ್‌ ತಂಡ ಈಗ ಮತ್ತೆ ಜಯದ ಮಂತ್ರ ಜಪಿಸುತ್ತಿದೆ.

ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಬುಧವಾರ ನಡೆಯುವ ಪ್ರೊ ಕಬಡ್ಡಿ ಲೀಗ್‌ ಏಳನೇ ಆವೃತ್ತಿಯ ಹಣಾಹಣಿಯಲ್ಲಿ ಸುರ್ಜೀತ್‌ ಸಿಂಗ್‌ ಬಳಗವು ದುರ್ಬಲ ತಮಿಳ್‌ ತಲೈವಾಸ್‌ ವಿರುದ್ಧ ಆಡಲಿದೆ. ಅಜಯ್‌ ಠಾಕೂರ್‌ ಸಾರಥ್ಯದ ತಲೈವಾಸ್‌ ಹಿಂದಿನ ಎಂಟು ಪಂದ್ಯಗಳಲ್ಲೂ ಸೋತಿದೆ.

ಈ ಸಲದ ಲೀಗ್‌ನಲ್ಲಿ ಒಟ್ಟು 16 ಪಂದ್ಯಗಳನ್ನು ಆಡಿರುವ ಪುಣೇರಿ, ಐದರಲ್ಲಿ ಗೆದ್ದು ಒಂಬತ್ತರಲ್ಲಿ ಸೋತಿದೆ. ಎರಡು ಪಂದ್ಯಗಳು ಟೈ ಆಗಿವೆ. 34 ಪಾಯಿಂಟ್ಸ್‌ ಕಲೆಹಾಕಿರುವ ಈ ತಂಡ ಪಟ್ಟಿಯಲ್ಲಿ 10ನೇ ಸ್ಥಾನ ಹೊಂದಿದೆ. ತಲೈವಾಸ್‌ ಕೊನೆಯ ಸ್ಥಾನ ಹೊಂದಿದೆ. ಈ ತಂಡದ ಖಾತೆಯಲ್ಲಿ 27 ಪಾಯಿಂಟ್ಸ್‌ ಇವೆ.

ADVERTISEMENT

ದಿನದ ಮೊದಲ ಪಂದ್ಯದಲ್ಲಿ ಯು ಮುಂಬಾ ಮತ್ತು ಯು.ಪಿ.ಯೋಧಾ ಮುಖಾಮುಖಿಯಾಗಲಿವೆ. ಈ ಹಣಾಹಣಿಯಲ್ಲಿ ಗೆದ್ದು ನಾಲ್ಕನೇ ಸ್ಥಾನಕ್ಕೇರಲು ಯೋಧಾ ತಂಡ ಹವಣಿಸುತ್ತಿದೆ. ಮುಂಬಾ ಕೂಡ ಜಯದ ವಿಶ್ವಾಸದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.