ADVERTISEMENT

ಪ್ರೊ ಕಬಡ್ಡಿ ಲೀಗ್‌: ದಬಾಂಗ್‌ಗೆ ಮಣಿದ ಬೆಂಗಾಲ್‌

ಪಿಟಿಐ
Published 16 ಡಿಸೆಂಬರ್ 2024, 21:54 IST
Last Updated 16 ಡಿಸೆಂಬರ್ 2024, 21:54 IST
<div class="paragraphs"><p>ಪ್ರೊ ಕಬಡ್ಡಿ ಲೀಗ್‌</p></div>

ಪ್ರೊ ಕಬಡ್ಡಿ ಲೀಗ್‌

   

ಪುಣೆ: ಅಶು ಮಲಿಕ್‌ ಅವರ ಅಮೋಘ ರೇಡಿಂಗ್‌ ಬಲದಿಂದ ಡೆಲ್ಲಿ ದಬಾಂಗ್‌ ತಂಡವು ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ 47–25ರಿಂದ ಬೆಂಗಾಲ್‌ ವಾರಿಯರ್ಸ್‌ ತಂಡವನ್ನು ಮಣಿಸಿತು.

ಬಾಲೇವಾಡಿ ಕ್ರೀಡಾಕಾಂಪ್ಲೆಕ್ಸ್‌ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ದಬಾಂಗ್‌ ವಿರಾಮದ ವೇಳೆ 26–9ರಿಂದ ಮುಂದಿತ್ತು. ಉತ್ತರಾರ್ಧದಲ್ಲೂ ಎದುರಾಳಿ ತಂಡಕ್ಕೆ ಚೇತರಿಸಿ ಕೊಳ್ಳಲು ಅವಕಾಶ ನೀಡದೆ ಡೆಲ್ಲಿ ತಂಡವು ಪಾರಮ್ಯ ಮೆರೆಯಿತು.

ADVERTISEMENT

17 ಅಂಕ ಗಳಿಸಿದ ಅಶು ಗೆಲುವಿನ ರೂವಾರಿಯಾದರು. ಅವರಿಗೆ ಯೋಗೇಶ್ ದಾಹಿಯಾ (9) ಸಾಥ್‌ ನೀಡಿದರು. ಈ ಗೆಲುವಿನೊಂದಿಗೆ ಡೆಲ್ಲಿ ತಂಡವು 71 ಪಾಯಿಂಟ್ಸ್‌ನೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಬಲಪಡಿಸಿಕೊಂಡಿತು.

ದಿನದ ಮತ್ತೊಂದು ಪಂದ್ಯದಲ್ಲಿ ಪಟ್ನಾ ಪೈರೇಟ್ಸ್‌ 37–32ರಿಂದ ಪುಣೇರಿ ಪಲ್ಟನ್‌ ತಂಡವನ್ನು ಸೋಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.