ADVERTISEMENT

ಪ್ರೊ ಕುಸ್ತಿ: ಎಂ.ಪಿ.ಯೋಧಾಗೆ ಮೊದಲ ಜಯ

​ಪ್ರಜಾವಾಣಿ ವಾರ್ತೆ
Published 15 ಜನವರಿ 2019, 17:44 IST
Last Updated 15 ಜನವರಿ 2019, 17:44 IST

ಪಂಚಕುಲ: ನಾಯಕಿ ಪೂಜಾ ಧಂಡಾ ಮತ್ತು ಸಂದೀಪ್‌ ತೋಮರ್‌ ಅವರ ಅಪೂರ್ವ ಸಾಮರ್ಥ್ಯದ ಬಲದಿಂದ ಎಂ.ಪಿ.ಯೋಧಾ ತಂಡ ‍ಪ್ರೊ ಕುಸ್ತಿ ಲೀಗ್‌ನಲ್ಲಿ (ಪಿಡಬ್ಲ್ಯುಎಲ್‌) ಚೊಚ್ಚಲ ಗೆಲುವು ದಾಖಲಿಸಿದೆ.

ತವು ದೇವಿಲಾಲ್‌ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಎಂ.ಪಿ.ಯೋಧಾ 4–3 ಯಿಂದ ಡೆಲ್ಲಿ ಸುಲ್ತಾನ್ಸ್‌ ತಂಡವನ್ನು ಪರಾಭವಗೊಳಿಸಿತು.

ಐದು ಬೌಟ್‌ಗಳ ಹೋರಾಟ ಮುಗಿದಾಗ ಯೋಧಾ 2–3 ಯಿಂದ ಹಿನ್ನಡೆ ಕಂಡಿತ್ತು. ಆರನೇ ಹೋರಾಟದಲ್ಲಿ ಪೂಜಾ 6–0ಯಿಂದ ರುಮೇನಿಯಾದ ಕ್ಯಾಥರಿನಾ ಜಯೆದಾಚಿವಾಸ್ಕ ಅವರನ್ನು ಸೋಲಿಸಿ 3–3 ಸಮಬಲಕ್ಕೆ ಕಾರಣರಾದರು.

ADVERTISEMENT

ನಿರ್ಣಾಯಕ ಏಳನೇ ಬೌಟ್‌ನಲ್ಲಿ ಸಂದೀಪ್‌ 9–7ಯಿಂದ ಡೆಲ್ಲಿ ತಂಡದ ಪಂಕಜ್‌ ಅವರನ್ನು ಮಣಿಸಿ ಯೋಧಾ ತಂಡದ ಸಂಭ್ರಮಕ್ಕೆ ಕಾರಣರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.