ADVERTISEMENT

ರಾಹುಲ್ 74ನೇ ಗ್ರ್ಯಾಂಡ್‌ಮಾಸ್ಟರ್

​ಪ್ರಜಾವಾಣಿ ವಾರ್ತೆ
Published 11 ಜೂನ್ 2022, 13:54 IST
Last Updated 11 ಜೂನ್ 2022, 13:54 IST

ಚೆನ್ನೈ (ಪಿಟಿಐ): ತೆಲಂಗಾಣದ ಚೆಸ್‌ ಸ್ಪರ್ಧಿ ಪಿ.ರಾಹುಲ್‌ ಶ್ರೀವಾಸ್ತವ್ ಅವರು ಭಾರತದ 74ನೇ ಗ್ರ್ಯಾಂಡ್‌ಮಾಸ್ಟರ್‌ ಎನಿಸಿಕೊಂಡರು.

ಫಿಡೆ ರೇಟಿಂಗ್‌ನಲ್ಲಿ 2,500 ಎಲೊ ಪಾಯಿಂಟ್ಸ್‌ ಗಡಿಯನ್ನು ತಲುಪಿದ್ದರಿಂದ ಅವರಿಗೆ ಈ ಪದವಿ ದೊರೆತಿದೆ. 19 ವರ್ಷದ ರಾಹುಲ್‌ ಅವರು ಇಟಲಿಯಲ್ಲಿ ನಡೆಯುತ್ತಿರುವ ಕ್ಯಾಥೊಲಿಕಾ ಚೆಸ್‌ ಫೆಸ್ಟಿವಲ್‌ನ ಎಂಟನೇ ಸುತ್ತಿನಲ್ಲಿ ಡ್ರಾ ಸಾಧಿಸಿದರು. ಈ ಟೂರ್ನಿಗೂ ಮುನ್ನ ಅವರು 2,468 ಎಲೊ ಪಾಯಿಂಟ್‌ ಹೊಂದಿದ್ದರು.

’100 ಗ್ರ್ಯಾಂಡ್‌ಮಾಸ್ಟರ್‌ಗಳನ್ನು ಪಡೆಯುವ ಹಾದಿಯಲ್ಲಿ ಭಾರತ, ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ತೆಲಂಗಾಣದ ರಾಹುಲ್‌, ಭಾರತದ 74ನೇ ಗ್ರ್ಯಾಂಡ್‌ಮಾಸ್ಟರ್‌ ಎನಿಸಿಕೊಂಡಿದ್ದಾರೆ. ರಾಹುಲ್‌, ಅವರ ಕೋಚ್ ಮತ್ತು ಕುಟುಂಬದ ಸದಸ್ಯರಿಗೆ ಅಭಿನಂದನೆಗಳು‘ ಎಂದು ಅಖಿಲ ಭಾರತ ಚೆಸ್‌ ಸಂಸ್ಥೆಯ ಅಧ್ಯಕ್ಷ ಸಂಜಯ್‌ ಕಪೂರ್‌ ಶನಿವಾರ ’ಟ್ವೀಟ್‌‘ ಮಾಡಿದ್ದಾರೆ.

ADVERTISEMENT

ವಿಶ್ವನಾಥನ್‌ ಆನಂದ್‌ ಅವರು 1988 ರಲ್ಲಿ ಭಾರತದ ಮೊದಲ ಗ್ರ್ಯಾಂಡ್‌ಮಾಸ್ಟರ್‌ ಎನಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.