ಬೆಂಗಳೂರು: ಜೊಶುವಾ, ಆದರ್ಶ್ ಅವರ ಅಮೋಘ ಆಟದ ನೆರವಿನಿಂದ ಬೆಂಗಳೂರು ರಾಮಯ್ಯ ತಾಂತ್ರಿಕ ಕಾಲೇಜಿನ ಪುರುಷರ ತಂಡವು ಗುರುವಾರ ಅಖಿಲ ಭಾರತ ಅಂತರ ಕಾಲೇಜು ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಯನ್ನು ಗೆದ್ದುಕೊಂಡಿತು.
ನಗರದ ಅಲೈಯನ್ಸ್ ವಿಶ್ವವಿದ್ಯಾಲಯದ ಆತಿಥ್ಯದಲ್ಲಿ ನಡೆದ ಚಾಂಪಿಯನ್‌ಷಿಪ್‌ನ ಫೈನಲ್ ಪಂದ್ಯದಲ್ಲಿ ರಾಮಯ್ಯ ಕಾಲೇಜು ತಂಡವು 82–73ರಿಂದ ಪಿಇಎಸ್ ವಿಶ್ವವಿದ್ಯಾಲಯ ತಂಡವನ್ನು ಮಣಿಸಿತು.
ರಾಮಯ್ಯ ತಂಡದ ಪರ ಜೊಶುವಾ 22, ಆದರ್ಶ್ 18 ಮತ್ತು ಪ್ರಾಣೇಶ್ 15 ಪಾಯಿಂಟ್ಸ್ ಗಳಿಸಿದರು. ಪಿಇಎಸ್‌ನ ಪೃಥ್ವಿ ಮತ್ತು ಅಲೆಕ್ಸ್ ಕ್ರಮವಾಗಿ 20 ಮತ್ತು 18 ಪಾಯಿಂಟ್ಸ್ ಕಲೆ ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.