ADVERTISEMENT

ಬ್ಯಾಸ್ಕೆಟ್‌ಬಾಲ್‌: ರಾಮಯ್ಯ ತಾಂತ್ರಿಕ ಸಂಸ್ಥೆಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 13:49 IST
Last Updated 1 ಜುಲೈ 2022, 13:49 IST
ಪ್ರಶಸ್ತಿಯೊಂದಿಗೆ ರಾಮಯ್ಯ ತಾಂತ್ರಿಕ ಸಂಸ್ಥೆಯ ಬ್ಯಾಸ್ಕೆಟ್‌ಬಾಲ್ ತಂಡ: ನಿಂತವರು (ಎಡದಿಂದ): ದಿನೇಶ್‌, ವಿಷ್ಣು, ರೋಹನ್‌, ಸಚಿನ್ ಬೆಳವಾಡಿ (ಕೋಚ್‌), ಅಕ್ಷನ್‌, ಅನೀಶ್ ಪ್ರದ್ಯುಮ್ನ, ಜೋಷುವಾ. ಕುಳಿತವರು: ಅಭಿಷೇಕ್‌, ರೇಹಾನ್‌, ಶ್ರೀನಿವಾಸ್, ಧ್ರುವ.

ಬೆಂಗಳೂರು: ರಾಮಯ್ಯ ತಾಂತ್ರಿಕ ಸಂಸ್ಥೆ (ಆರ್‌ಐಟಿ) ಕಾಲೇಜು ತಂಡವು ಪುರುಷರ ರಾಜ್ಯಮಟ್ಟದ ಅಂತರಕಾಲೇಜು ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದೆ.

ಇಲ್ಲಿಯ ಸೇಂಟ್‌ ಜೋಸೆಫ್‌ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ರಾಮಯ್ಯ ಸಂಸ್ಥೆಯ ತಂಡವು 72–61ರಿಂದ ಆರ್‌ವಿಸಿಇ ತಂಡವನ್ನು ಪರಾಭವಗೊಳಿಸಿತು. ವಿಜೇತ ತಂಡದ ಪರ ಪ್ರದ್ಯುಮ್ನ 20 ಮತ್ತು ರೋಹನ್ 15 ಪಾಯಿಂಟ್ಸ್ ಗಳಿಸಿದರು. ಆರ್‌ಸಿವಿಇ ತಂಡದ ನಕುಲ್‌ 18 ಮತ್ತು ವಿಕಾಸ್‌ 16 ಪಾಯಿಂಟ್ಸ್ ಕಲೆಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT