ಬೆಂಗಳೂರು: ಬಿಎನ್ಎಂ ಕ್ಲಬ್ನ ರೆಯಾನ್ಶ್ ಜಲನ್ ಮತ್ತು ಬಿಟಿಟಿಎ ಕ್ಲಬ್ನ ತನಿಷ್ಕಾ ಕಪಿಲ್ ಭಾನುವಾರ ಆರಂಭಗೊಂಡ ಸಿ.ವಿ.ಎಲ್ ಶಾಸ್ತ್ರಿ ಸ್ಮಾರಕ ರಾಜ್ಯ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನ ‘ಹೋಪ್ಸ್’ ವಿಭಾಗದಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.
ಮಲ್ಲೇಶ್ವರ ಅಸೋಸಿಯೇಷನ್ನ ಅಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರೆಯಾನ್ಶ್ 11-9, 11-6, 11-8ರಲ್ಲಿ ಅಭಿನವ್ ಪ್ರಸನ್ನ ವಿರುದ್ಧ ಜಯ ಗಳಿಸಿದರು. ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ತನಿಷ್ಕಾ 9-11, 11-6, 11-5, 11-2ರಲ್ಲಿ ರಾಶಿ ವಿ.ರಾವ್ ಎದುರು ಜಯ ಸಾಧಿಸಿದರು. ‘ಹೋಪ್ಸ್’ ವಿಭಾಗವನ್ನು ಇದೇ ಮೊದಲು ಸೇರಿಸಲಾಗಿತ್ತು.
ಬಾಲಕರ ವಿಭಾಗದ ಸೆಮಿಫೈನಲ್ನಲ್ಲಿ ರೆಯಾನ್ಶ್ 11-4, 11-4, 11-3ರಲ್ಲಿ ಅಮನ್ ಜಾರ್ಜ್ ಥಾಮಸ್ ವಿರುದ್ಧ ಜಯ ಗಳಿಸಿದರೆ ಅಭಿನವ್ ಪ್ರಸನ್ನ 11-7, 11-13, 9-11, 11-9, 11-6ರಲ್ಲಿ ತಮೊಜ್ಞ ವಿರುದ್ಧ ಗೆಲುವು ಸಾಧಿಸಿದರು. ಕ್ವಾರ್ಟರ್ ಫೈನಲ್ನಲ್ಲಿ ರೆಯಾನ್ಶ್11-3, 11-8, 11-9ರಲ್ಲಿ ಪ್ರಥಮ್ ವಿ ರಾವ್ ವಿರುದ್ಧ, ಅಮನ್ ಜಾರ್ಜ್ 11-5, 8-11, 3-11, 11-8, 11-7ರಲ್ಲಿ ಬಿಟಿಟಿಯ ಪ್ರಚಿತ್ ವಿರುದ್ಧ, ತಮೊಜ್ಞ 8-11, 11-6, 11-9, 9-11, 11-8ರಲ್ಲಿ ಉಪೇಂದ್ರ ವಿರುದ್ಧ, ಅಭಿನವ್ ಪ್ರಸನ್ನ 3-11, 11-6, 11-1, 11-8 ಪ್ರಥಮ್ ಕುಲಕರ್ಣಿ ವಿರುದ್ಧ ಜಯ ಗಳಿಸಿದರು.
ಬಾಲಕಿಯರ ವಿಭಾಗದ ಸೆಮಿಫೈನಲ್ನಲ್ಲಿ ತನಿಷ್ಕಾ ಕಪಿಲ್ ಬಿಎನ್ಎಂನ ಐರಿನ್ ಅನಾ ಸುಭಾಷ್ ವಿರುದ್ಧ 11-1, 11-1, 11-2ರಲ್ಲಿ, ರಾಶಿ ರಾವ್ ಬಿಎನ್ಎಂನ ಯುಕ್ತಾ ಹರ್ಷ ವಿರುದ್ಧ 11-3, 11-5, 11-3ರಲ್ಲಿ ಗೆಲುವು ಸಾಧಿಸಿದರು. ಕ್ವಾರ್ಟರ್ ಫೈನಲ್ನಲ್ಲಿ ತನಿಷ್ಕಾ ಕಪಿಲ್11-3, 11-3, 11-1ರಲ್ಲಿ ಅನೆಟ್ ಮರಿಯಾನ ವಿರುದ್ಧ, ರಾಶಿ ವಿ.ರಾವ್ 11-6, 11-4, 12-10ರಲ್ಲಿ ಬಿಎನ್ಎಂನ ಸಂಚಿತಾ ವಿರುದ್ಧ, ಬಿಎನ್ಎಂನ ಯುಕ್ತಾ ಹರ್ಷ 11-7, 13-11, 11-8ರಲ್ಲಿ ಸ್ತುತಿ ವಿರುದ್ಧ, ಐರಿನ್ ಅನಾ11-9, 11-4, 11-7ರಲ್ಲಿ ಅನುಷಾ ವಿರುದ್ಧ ಗೆಲುವು ಸಾಧಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.