ADVERTISEMENT

ರೋಡ್‌ ಸೈಕ್ಲಿಂಗ್: 30 ರಂದು ಆಯ್ಕೆ ಟ್ರಯಲ್ಸ್

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2018, 13:29 IST
Last Updated 27 ಸೆಪ್ಟೆಂಬರ್ 2018, 13:29 IST

ಮೈಸೂರು: 11ನೇ ರಾಜ್ಯಮಟ್ಟದ ರೋಡ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ಗೆ ಮೈಸೂರು ಜಿಲ್ಲಾ ತಂಡದ ಆಯ್ಕೆಗಾಗಿ ಸೆಪ್ಟೆಂಬರ್‌ 30 ರಂದು ಬೆಳಿಗ್ಗೆ 6.30 ರಿಂದ ತಿ.ನರಸೀಪುರ ರಸ್ತೆ, ರಿಂಗ್‌ ರಸ್ತೆ ಜಂಕ್ಷನ್‌ನಲ್ಲಿ ಟ್ರಯಲ್ಸ್‌ ನಡೆಯಲಿದೆ.

14, 16 ಮತ್ತು 18 ವರ್ಷ ವಯಸ್ಸಿನೊಳಗಿನ ಬಾಲಕ, ಬಾಲಕಿಯರು, 23 ವರ್ಷದೊಳಗಿನ ಬಾಲಕರು ಹಾಗೂ ಎಲೈಟ್‌ ಪುರುಷ ಹಾಗೂ ಮಹಿಳೆಯರ ವಿಭಾಗಗಳಲ್ಲಿ ಆಯ್ಕೆ ಟ್ರಯಲ್ಸ್‌ ಆಯೋಜಿಸಲಾಗಿದೆ ಎಂದು ಮೈಸೂರು ಜಿಲ್ಲಾ ಸೈಕ್ಲಿಂಗ್‌ ಸಂಸ್ಥೆ ಪ್ರಕಟಣೆ ತಿಳಿಸಿದೆ.

ರಾಜ್ಯಮಟ್ಟದ ಚಾಂಪಿಯನ್‌ಷಿಪ್‌ ಅಕ್ಟೋಬರ್‌ 12 ರಂದು ಹುಬ್ಬಳ್ಳಿಯಲ್ಲಿ ನಡೆಯಲಿದೆ. ಆಸಕ್ತರು ಸೆ.29ರ ಒಳಗಾಗಿ ಹೆಸರು ನೋಂದಾಯಿಸಬಹುದು. ಮಾಹಿತಿಗೆ ಮೊ: 9880244649 ಸಂಪರ್ಕಿಸಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.