ADVERTISEMENT

ಹಾಫ್‌ ಮ್ಯಾರಥಾನ್‌: ಸಾಹಿಲ್, ಸುಮಾಗೆ ಚಿನ್ನ

ವಿಟಿಯು ಅಂತರ ಕಾಲೇಜು ಅಥ್ಲೆಟಿಕ್ಸ್‌

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 18:38 IST
Last Updated 25 ಅಕ್ಟೋಬರ್ 2019, 18:38 IST
ಬೀದರ್‌ನಲ್ಲಿ ಶುಕ್ರವಾರ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಅಂತರ ಕಾಲೇಜುಗಳ ಅಥ್ಲೆಟಿಕ್ಸ್‌ ಕ್ರೀಡಾಕೂಟದ 21 ಕಿ.ಮೀ. ಹಾಫ್‌ ಮ್ಯಾರಥಾನ್‌ನ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಾಜಿಯ ಮಹಮ್ಮದ್‌ ಸಾಹಿಲ್‌ ಅಣ್ಣಿಗೇರಿ
ಬೀದರ್‌ನಲ್ಲಿ ಶುಕ್ರವಾರ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಅಂತರ ಕಾಲೇಜುಗಳ ಅಥ್ಲೆಟಿಕ್ಸ್‌ ಕ್ರೀಡಾಕೂಟದ 21 ಕಿ.ಮೀ. ಹಾಫ್‌ ಮ್ಯಾರಥಾನ್‌ನ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಾಜಿಯ ಮಹಮ್ಮದ್‌ ಸಾಹಿಲ್‌ ಅಣ್ಣಿಗೇರಿ   

ಬೀದರ್: ಬೆಂಗಳೂರಿನ ಮಹಮ್ಮದ್‌ ಸಾಹಿಲ್‌ ಅಣ್ಣಿಗೇರಿ ಹಾಗೂ ಕಾರ್ಕಳದ ಸುಮಾ,ಗುರುನಾನಕ ದೇವ ಎಂಜಿನಿಯರಿಂಗ್‌ ಕಾಲೇಜು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂತರ ಕಾಲೇಜು ಅಥ್ಲೆಟಿಕ್ಸ್‌ ಕೂಟದ ಹಾಫ್‌ ಮ್ಯಾರಥಾನ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಅಗ್ರಸ್ಥಾನ ಪಡೆದರು.

ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಮಹಮ್ಮದ್ ಸಾಹಿಲ್‌ 21 ಕಿ.ಮೀ. ದೂರದ ಈ ಸ್ಪರ್ಧೆಯನ್ನು 1ಗಂಟೆ 16 ನಿಮಿಷ 35.98 ಸೆಕೆಂಡುಗಳಲ್ಲಿ ಕ್ರಮಿಸಿದರು.

ಕಾರ್ಕಳದ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಸುಮಾ ಈ ಅಂತರವನ್ನು1 ಗಂಟೆ 30 ನಿ. 38.16 ಸೆ.ಗಳಲ್ಲಿ ಪೂರೈಸಿದರು.

ADVERTISEMENT

14 ಸ್ಪರ್ಧೆಗಳು ರದ್ದು: ಗುರುವಾರ ಬೆಳಗಿನ ಜಾವ ಸುರಿದ ಮಳೆಯ ಕಾರಣ ಕಾಲೇಜಿನ ಕ್ರೀಡಾಂಗಣದಲ್ಲಿ ನೀರು ನಿಂತು ಸ್ಪರ್ಧೆಗಳಿಗೆ ತೊಡಕುಂಟಾಯಿತು. ನಾಲ್ಕು ದಿನಗಳ ಅವಧಿಯಲ್ಲಿ ಒಟ್ಟು 41 ಸ್ಪರ್ಧೆಗಳ ಪೈಕಿ 27 ಸ್ಪರ್ಧೆಗಳನ್ನು ಮಾತ್ರ ನಡೆಸಲು ಸಾಧ್ಯವಾಗಿದೆ. 14 ಸ್ಪರ್ಧೆಗಳು ಬಾಕಿ ಇರುವಾಗಲೇ ವಿಟಿಯು ಆಡಳಿತ ಮಂಡಳಿ ತಾಂತ್ರಿಕ ಕಾರಣ ನೀಡಿ ಪಂದ್ಯಗಳನ್ನು ರದ್ದುಪಡಿಸಿತು. ಇನ್ನುಳಿದ ಸ್ಪರ್ಧೆಗಳನ್ನು ಬೆಂಗಳೂರಿನಲ್ಲಿ ನಡೆಸಿ ಅಲ್ಲಿಯೇ ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಫಲಿತಾಂಶಗಳು
ಪುರುಷರ ವಿಭಾಗ:5 ಸಾವಿರ ಮೀಟರ್‌ ಓಟ:ನಾಗರಾಜ ಸಿದ್ದಪ್ಪ ಕೇದಾರಜಿ (ಎಸ್‌ಇಎ ಕಾಲೇಜ್‌ ಆಫ್ ಎಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿ, ಕಾಲ: 18 ನಿ.11.4 ಸೆ.)–1, ಮಹಮ್ಮದ್ ಸಾಹಿಲ್‌ ಅಣ್ಣಿಗೇರಿ (ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ, ಬೆಂಗಳೂರು, ಕಾಲ: 18ನಿ.53.3 ಸೆ.)–2, ಸತೀಶ ಪುಣೇಕರ್‌ (ವಿದ್ಯಾವಿಕಾಸ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಮೈಸೂರು, ಕಾಲ: 19ನಿ.36.45 ಸೆ.)–3.

ಹಾಫ್‌ ಮ್ಯಾರಥಾನ್‌ ಓಟ: ಮಹಮ್ಮದ್‌ ಸಾಹಿಲ್‌ ಅಣ್ಣಿಗೇರಿ (ಕಾಲ: 1ಗಂ.16ನಿ.35.98 ಸೆ.)–1, ಸುಜನ್‌ ಶೇಖರ್‌ ಎಚ್‌.ಎಸ್‌. (ಆಳ್ವಾಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿಯ, ಮೂಡುಬಿದಿರೆ, ಕಾಲ: 1ಗಂ.19ನಿ.47 ಸೆ.)–2,ರಮೇಶ್‌ (ವಿದ್ಯಾವಿಕಾಸ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಮೈಸೂರು, 1 ಗಂ.19 ನಿ. 47.78 ಸೆ)–3.

ಮಹಿಳೆಯರ ವಿಭಾಗ

ಹಾಫ್‌ ಮ್ಯಾರಾಥನ್‌ ಓಟ: ಸುಮಾ (ಎನ್‌ಎಂಎಎಂ ಐಟಿ ಕಾರ್ಕಳ, ಕಾಲ: 1ಗಂ.30ನಿ.38.16 ಸೆ.)–1, ರಕ್ಷಿತಾ (ಬಿಎಂಎಸ್‌ ಕಾಲೇಜ್ ಆಫ್‌ ಎಂಜಿನಿಯರಿಂಗ್‌, ಬೆಂಗಳೂರು. ಕಾಲ: 1ಗಂ.59ನಿ.27.63 ಸೆಕೆಂಡ್‌),ರಕ್ಷಿತಾ ಎಂ.ಬಿ. (ಎಂ.ವಿ ಜೆ.ಕಾಲೇಜ್‌ ಆಫ್‌ ಎಂಜಿನಿಯರಿಂಗ್‌, ಬೆಂಗಳೂರು: ಕಾಲ: 2ಗಂ.12ನಿ.47 ಸೆ.)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.