ADVERTISEMENT

ಬ್ಯಾಸ್ಕೆಟ್‌ಬಾಲ್‌: ಧಾರವಾಡ, ಮೈಸೂರು ತಂಡಗಳು ಸೆಮಿಗೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 20:00 IST
Last Updated 16 ಆಗಸ್ಟ್ 2019, 20:00 IST
   

ಬೆಂಗಳೂರು: ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್‌) ಧಾರವಾಡ ಕೇಂದ್ರ ಮತ್ತು ಮೈಸೂರಿನ ಡಿವೈಇಎಸ್ ತಂಡಗಳು ರಾಜ್ಯ ಜೂನಿಯರ್ (18 ವರ್ಷದೊಳಗಿನವರು) ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದ ಸೆಮಿಫೈನಲ್ ಪ್ರವೇಶಿಸಿದವು.

ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಬಾಲಕರ ವಿಭಾಗದ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಸಾಯ್‌ 95–45ರಲ್ಲಿ ಎನ್‌ಜಿವಿ ಬ್ಯಾಸ್ಕೆಟ್‌ಬಾಲ್ ಕ್ಲಬ್ ಎದುರು ಗೆಲುವು ಸಾಧಿಸಿತು. ಪ್ರಥಮಾರ್ಧದಲ್ಲಿ 42–19ರ ಮುನ್ನಡೆ ಸಾಧಿಸಿದ ಸಾಯ್ ತಂಡ ನಂತರವೂ ಅಮೋಘ ಆಟ ಮುಂದುವರಿಸಿ ಸುಲಭವಾಗಿ ನಾಲ್ಕರ ಘಟ್ಟ ಪ್ರವೇಶಿಸಿತು. ಮನೋಜ್ (21 ಪಾಯಿಂಟ್‌) ಮತ್ತು ವಿವೇಕ್ (17) ಮಿಂಚಿದರು. ಎನ್‌ಜಿವಿ ಪರ ವ್ಯಾಸ 29 ಪಾಯಿಂಟ್ ಗಳಿಸಿದರು.

ಉಳಿದ ಪಂದ್ಯಗಳಲ್ಲಿ ಬಿ.ಸಿ ಬಿ.ಸಿ ತಂಡ (ಅಕ್ಸಾನ್ 36, ತರುಣ್‌ 12) ಬೀಗಲ್ಸ್‌ ಬಿ.ಸಿ (ಶ್ರೇಯಸ್‌ 34, ಅಚಿಂತ್ಯ 23) ವಿರುದ್ಧ 69–65ರಲ್ಲಿ, ಐಬಿ ಬಿ.ಸಿ (ಆ್ಯರನ್ 21, ಕಿರಣ್ 10) ವೈಎಂಎಂಎ (ವಾಸು 20, ಪ್ರಶಾಂತ್‌ 18) ವಿರುದ್ಧ 58–51ರಲ್ಲಿ ಜಯ ಗಳಿಸಿತು. ಬೆಂಗಳೂರು ಡಿವೈಇಎಸ್‌ (ಸುದೀಪ್ 28, ಶಶಿಧರ್‌ 18) ಮೈಸೂರಿನ ಆರ್ಯನ್ಸ್‌ (ದೀಪಕ್ 13) ವಿರುದ್ಧ 70–38ರಲ್ಲಿ ಜಯ ಸಾಧಿಸಿತು.

ADVERTISEMENT

ಬಾಲಕಿಯರ ವಿಭಾಗ: ಮೈಸೂರಿನ ಡಿವೈಎಸ್‌ (ಸೌಮಿಕಾ 16, ಹರಿಣಿ 12) ಬೆಂಗಳೂರಿನ ಡಿವೈಇಸ್‌ ವಿದ್ಯಾನಗರ (ಮಾನಸ 11) ತಂಡವನ್ನು 45–25ರಲ್ಲಿ ಮಣಿಸಿತು. ಮೌಂಟ್ಸ್‌ ಕ್ಲಬ್ (ಅರಿಜಿಲಾ 10) ಜೆಎಸ್‌ಸಿ (ಶ್ವೇತಾಂಗಿ 13) ತಂಡವನ್ನು 53–27ರಲ್ಲಿ ಸೋಲಿಸಿತು. ಬೀಗಲ್ಸ್‌ ಬಿ.ಸಿ (ಅನಘಾ 16, ಮೀನಾ 10) ಎನ್‌ಜಿವಿ ಬಿ.ಸಿ (ಸುನಿಕ್ಷಾ 11) ತಂಡದ ವಿರುದ್ಧ 47–28ರಲ್ಲಿ ಜಯಿಸಿತು. ರಾಜಮಹಲ್ ಬಿ.ಸಿ (ಐಶ್ವರ್ಯಾ 12, ಸಂಜನಾ 10) ಮಂಡ್ಯದ ಡಿವೈಇಎಸ್‌ (ಯಶಸ್ವಿನಿ 18) ವಿರುದ್ಧ 46–31ರಲ್ಲಿ ಗೆಲುವು ಸಾಧಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.