ಬಾಸೆಲ್, ಸ್ವಿಟ್ಜರ್ಲೆಂಡ್: ವೀರೋಚಿತ ಹೋರಾಟದಲ್ಲಿಒಲಿಂಪಿಕ್ ಕಂಚು ವಿಜೇತ ಸೈನಾ ವಿಶ್ವಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಿಂದ ಹೊರಬಿದ್ದರು.
ಗುರುವಾರ ರಾತ್ರಿ ನಡೆದ ಪ್ರೀಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಅವರು ಡೆನ್ಮಾರ್ಕ್ನ ಮಿಯಾ ಬ್ಲಿಚ್ಫೆಲ್ಟ್ ವಿರುದ್ಧ 21–15, 25–27, 12–21ರಿಂದ ಮಣಿದರು. ಎಂಟನೇ ಶ್ರೇಯಾಂಕದ ಸೈನಾ ಹಾಗೂ 12ನೇ ಶ್ರೇಯಾಂಕದ ಮಿಯಾ ನಡುವಣ ಈ ಹಣಾಹಣಿ ಒಂದು ತಾಸು 12 ನಿಮಿಷಗಳವರೆಗೆ ನಡೆಯಿತು. ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲಿಸಿತ್ತು.
2015ರಲ್ಲಿ ಜಕಾರ್ತದಲ್ಲಿ ಬೆಳ್ಳಿ ಹಾಗೂ 2017ರ ಗ್ಲಾಸ್ಗೊವಿಶ್ವ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕಗಳು ಸೈನಾಗೆ ಒಲಿದಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.