ADVERTISEMENT

ವಿಶ್ವ ಅಥ್ಲೆಟಿಕ್ಸ್‌: ಸ್ಟೀಪಲ್‌ ಚೇಸ್‌ನಲ್ಲಿ ಅವಿನಾಶ್ ಸಾಬ್ಳೆಗೆ ನಿರಾಸೆ

ಪಿಟಿಐ
Published 19 ಆಗಸ್ಟ್ 2023, 13:49 IST
Last Updated 19 ಆಗಸ್ಟ್ 2023, 13:49 IST
ಅವಿನಾಶ್ ಸಾಬ್ಳೆ –ಟ್ವಿಟರ್‌ ಚಿತ್ರ
ಅವಿನಾಶ್ ಸಾಬ್ಳೆ –ಟ್ವಿಟರ್‌ ಚಿತ್ರ   @afiindia

ಬುಡಾಪೆಸ್ಟ್‌ : 3000 ಮೀ.ಸ್ಟೀಪಲ್‌ ಚೇಸ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಅವಿನಾಶ್ ಸಾಬ್ಳೆ, ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್ಸ್‌ನ ಅಂತಿಮ ಸುತ್ತಿಗೆ ಅರ್ಹತೆ ಪಡೆಯಲು ವಿಫಲರಾದರು. ಶನಿವಾರ ನಡೆದ ಮೊದಲನೇ ಹೀಟ್ಸ್‌ನಲ್ಲಿ ಶನಿವಾರ ಏಳನೇ ಸ್ಥಾನದಲ್ಲಿ ಪೂರೈಸಿದ್ದು ನಿರಾಶಾದಾಯಕ ಎನಿಸಿತು.

ಈ ಕೂಟಕ್ಕಾಗಿ ಸಾಬ್ಳೆ ಅವರು ಹೆಲವು ತಿಂಗಳಿಂದ ವಿದೇಶದಲ್ಲಿ ತರಬೇತಿ ಪಡೆದಿದ್ದರು. ಈ ಪ್ರತಿಷ್ಠಿತ ಕೂಟಕ್ಕೆ ಸಜ್ಜಾಗಲು ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಿಂದ ಅವರಿಗೆ ವಿನಾಯಿತಿಯನ್ನೂ ನೀಡಲಾಗಿತ್ತು. ಅವರು ಶನಿವಾರ 8ನಿ.22.24 ಸೆ.ಗಳಲ್ಲಿ ಓಟ ಮುಗಿಸಿದರು. ರಾಷ್ಟ್ರೀಯ ದಾಖಲೆ (8ನಿ.11.20 ಸೆ) ಅವರ ಹೆಸರಿನಲ್ಲಿದೆ.

ಮೂರು ಹೀಟ್ಸ್‌ಗಳಲ್ಲಿ ಮೊದಲ ಐದು ಸ್ಥಾನ ಪಡೆದವರು ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.