ADVERTISEMENT

ಶೂಟಿಂಗ್‌: ನರೇನ್‌, ಜ್ಯೋತಿಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 19:26 IST
Last Updated 2 ಜೂನ್ 2022, 19:26 IST
ಅಂಗವಿಕಲರ ವಿಭಾಗದಲ್ಲಿ ಜ್ಯೋತಿ ಸಣ್ಣಕ್ಕಿ (ಪ್ರಥಮ), ಸಚಿನ್ ಸಿದ್ದಣ್ಣವರ್ (ದ್ವಿತೀಯ–ಎಡಭಾಗದಲ್ಲಿರುವವರು), ಶಂಕರಲಿಂಗ ತವಳಿ (ತೃತೀಯ) ಪದಕದೊಂದಿಗೆ ಸಂಭ್ರಮಿಸಿದರು
ಅಂಗವಿಕಲರ ವಿಭಾಗದಲ್ಲಿ ಜ್ಯೋತಿ ಸಣ್ಣಕ್ಕಿ (ಪ್ರಥಮ), ಸಚಿನ್ ಸಿದ್ದಣ್ಣವರ್ (ದ್ವಿತೀಯ–ಎಡಭಾಗದಲ್ಲಿರುವವರು), ಶಂಕರಲಿಂಗ ತವಳಿ (ತೃತೀಯ) ಪದಕದೊಂದಿಗೆ ಸಂಭ್ರಮಿಸಿದರು   

ಪ್ರಜಾವಾಣಿ ವಾರ್ತೆ

ಹುಬ್ಬಳ್ಳಿ: ನರೇನ್ ಪ್ರಣವ್ ಗುರುವಾರ ಇಲ್ಲಿಸ್ಪೋರ್ಟ್ಸ್‌ ಶೂಟಿಂಗ್ ಅಕಾಡೆಮಿ ಆಶ್ರಯದಲ್ಲಿ ನಡೆದ 2ನೇ ಓಪನ್ ಶೂಟಿಂಗ್ ಸ್ಪರ್ಧೆಯ 10 ಮೀಟರ್ ಏರ್‌ ರೈಫಲ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು.

ಅರ್ಜುನ್ ಸ್ಪೋರ್ಟ್ಸ್‌ ಶೂಟಿಂಗ್ ಅಕಾಡೆಮಿಯ 14 ವರ್ಷದ ನರೇನ್ ನಿಕಟ ಪೈಪೋಟಿಯನ್ನು ಎದುರಿಸಿ ಪ್ರಥಮರಾದರು. ತುಮಕೂರಿನ ವಿವೇಕಾನಂದ ಸ್ಪೋರ್ಟ್ಸ್‌ ಮತ್ತು ಕಲ್ಚರಲ್‌ ಅಸೋಸಿಯೇಷನ್‌ನ ಕಿರಣ್‌ ನಂದನ ಅವರು ಬೆಳ್ಳಿ ಮತ್ತುಕರ್ನಾಟಕ ರೈಫಲ್ಸ್‌ ಅಸೋಸಿಯೇಷನ್‌ನ ಶ್ರೀಕೃಷ್ಣ ಕಂಚು ಗಳಿಸಿದರು. ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದವರಿಗೆ ಕ್ರಮವಾಗಿ ₹1 ಲಕ್ಷ, ₹ 50ಸಾವಿರ ಮತ್ತು ₹ 25 ಸಾವಿರ ನಗದು ಪ್ರಶಸ್ತಿ ನೀಡಲಾಯಿತು. ಅಂಗವಿಕಲರ ವಿಭಾ ಗದಲ್ಲಿ ಜ್ಯೋತಿ ಸಣ್ಣಕ್ಕಿ ಚಿನ್ನ ಗೆದ್ದರೆ, ಸಚಿನ್ ಸಿದ್ದಣ್ಣವರ್ ಬೆಳ್ಳಿ ಹಾಗೂ ಶಂಕರಲಿಂಗ ತವಳಿ ಕಂಚು ಗಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.