ADVERTISEMENT

ಕೆನಡಾ ಓಪನ್‌: ಶ್ರೀಯಾಂಶಿ ಯಶಸ್ಸಿನ ಓಟ ಅಂತ್ಯ

ಪಿಟಿಐ
Published 4 ಜುಲೈ 2025, 20:05 IST
Last Updated 4 ಜುಲೈ 2025, 20:05 IST
ಬ್ಯಾಡ್ಮಿಂಟನ್
ಬ್ಯಾಡ್ಮಿಂಟನ್   

ಕ್ಯಾಲ್ಗರಿ: ಕೆನಡಾ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಶ್ರಿಯಾಂಶಿ ವಲಿಶೆಟ್ಟಿ ಅವರ ಸ್ಫೂರ್ತಿಯುತ ಓಟ ಅಂತ್ಯಗೊಂಡಿತು. ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಅವರು ಡೆನ್ಮಾರ್ಕ್‌ನ ಅಮೇಲಿ ಶುಲ್ಝ್ ಅವರಿಗೆ ಮಣಿದರು.

ವಿಶ್ವ ಕ್ರಮಾಂಕದಲ್ಲಿ 75ನೇ ಸ್ಥಾನದಲ್ಲಿರುವ ವಲಿಶೆಟ್ಟಿ 21–12, 19–21, 19–21ರಲ್ಲಿ 69ನೇ ಕ್ರಮಾಂಕದ ಅಮೇಲಿ ಅವರಿಗೆ ಮಣಿದರು.

ವಲಿಶೆಟ್ಟಿ ಅವರು ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ 45ನೇ ಕ್ರಮಾಂಕದ ಲೆಟ್ಶಾನಾ ಕರುಪಥೆವನ್ ಅವರನ್ನು ಬರೇ 35 ನಿಮಿಷಗಳಲ್ಲಿ 21–15, 21–14 ರಿಂದ ಸೋಲಿಸಿ ಎಂಟರ ಘಟ್ಟ ತಲುಪಿದ್ದರು.

ADVERTISEMENT

ಪುರುಷರ ಸಿಂಗಲ್ಸ್‌ನಲ್ಲಿ ಎಸ್‌.ಶಂಕರ್‌ ಮುತ್ತುಸ್ವಾಮಿ 21–19, 21–14 ರಿಂದ ತೈಪೆಯ ಹುವಾಂಗ್ ಯು ಕೈ ಅವರನ್ನು ಸೋಲಿಸಿ ಎಂಟರ ಘಟ್ಟ ತಲುಪಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.