ಗುವಾಂಗ್‌ಝೌ: ಎರಡು ಸೋಲುಗಳ ನಂತರ ಭಾರತದ ಪಿ.ವಿ.ಸಿಂಧು, ಬಿಡಬ್ಲ್ಯುಎಫ್ ವಿಶ್ವ ಟೂರ್ ಬ್ಯಾಡ್ಮಿಂಟನ್ ಫೈನಲ್‌ನ ‘ಎ’ ಗುಂಪಿನ ಮೂರನೇ ಪಂದ್ಯ ದಲ್ಲಿ ಶುಕ್ರವಾರ ಚೀನಾದ ಹೆ ಬಿಂಗ್ ಜಿಯಾವೊ ಅವರನ್ನು ಸೋಲಿಸಿದರು.
ಮೊದಲ ಎರಡು ದಿನ ಅನುಭವಿಸಿದ ಸೋಲುಗಳ ನಂತರ ಸಿಂಧು ಅವರಿಗೆ ಪ್ರಶಸ್ತಿ ಅವಕಾಶ ಕ್ಷೀಣವಾಗಿತ್ತು.
ಮೊದಲ ಗೇಮ್‌ನಲ್ಲಿ 9–18ರ ಹಿನ್ನಡೆಯಿಂದ ಅಮೋಘ ರೀತಿ ಚೇತರಿಸಿಕೊಂಡ ಸಿಂಧು 21–19, 21–19 ರಿಂದ ಚೀನಾ ಆಟಗಾರ್ತಿ ವಿರುದ್ಧ ಜಯಗಳಿಸಿದರು.
ಇಲ್ಲಿ ಗೆಲ್ಲುವ ಮೂಲಕ ಸಿಂಧು, ಇದೇ ಎದುರಾಳಿ ವಿರುದ್ಧ ಸತತ ನಾಲ್ಕು ಪಂದ್ಯಗಳ ಸೋಲಿನ ಸರಣಿಯನ್ನು ಅಂತ್ಯಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.