ಮಲೇಷ್ಯಾ ಮಾಸ್ಟರ್ಸ್ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ ಜಯಿಸಿದ ಚೀನಾದ ಲಿ ಶಿ ಫಿಂಗ್ (ಬಲಕ್ಕೆ) ಮತ್ತು ರನ್ನರ್ಸ್ ಅಪ್ ಕೆ. ಶ್ರೀಕಾಂತ್ ಪ್ರಶಸ್ತಿಯೊಂದಿಗೆ ಇದ್ದಾರೆ
– ಪಿಟಿಐ ಚಿತ್ರ
ಕೌಲಾಲಂಪುರ: ಕಿದಂಬಿ ಶ್ರೀಕಾಂತ್ ಅವರ ಪ್ರಶಸ್ತಿ ಬರ ಭಾನುವಾರವೂ ನೀಗಲಿಲ್ಲ. ಮಲೇಷ್ಯಾ ಮಾಸ್ಟರ್ಸ್ ಸೂಪರ್ ಬ್ಯಾಡ್ಮಿಂಟನ್ ನಲ್ಲಿ ಅವರು ರನ್ನರ್ಸ್ ಅಪ್ ಆಗಲಷ್ಟೇ ಸಾಧ್ಯವಾಯಿತು.
ಇಲ್ಲಿ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ 32 ವರ್ಷ ಶ್ರೀಕಾಂತ್ 11–21, 9–21ರಿಂದ ಚೀನಾದ ಎರಡನೇ ಶ್ರೇಯಾಂಕದ ಲಿ ಶಿ ಫೆಂಗ್ ವಿರುದ್ಧ ಮಣಿದರು. 36 ನಿಮಿಷಗಳ ಹೋರಾಟದಲ್ಲಿ ಚೀನಾ ಆಟಗಾರ ಮೇಲುಗೈ ಸಾಧಿಸಿದರು.
ಅವರು ಗಾಯದ ಸಮಸ್ಯೆಯಿಂದಾಗಿ ಪ್ರಮುಖ ಟೂರ್ನಿಗಳಿಂದ ಹಿಂದೆ ಸರಿದಿದ್ದರು. ಚೇತರಿಸಿಕೊಂಡ ನಂತರ ಮಲೇಷ್ಯಾ ಮಾಸ್ಟರ್ ಬಿಡಬ್ಲ್ಯುಎಫ್ 500 ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು.
ಟೂರ್ನಿಯುದ್ದಕ್ಕೂ ಶ್ರೀಕಾಂತ್ ಅಮೋಘ ಆಟವಾಡಿ ಫೈನಲ್ ಪ್ರವೇಶಿ ಸಿದ್ದರು. ಈ ಪಂದ್ಯದ ಆರಂಭದಲ್ಲಿ ಶ್ರೀಕಾಂತ್ ಕೆಲವು ಲೋಪಗಳನ್ನು ಎಸಗಿ ದರು. ಅದರ ಲಾಭ ಪಡೆದುಕೊಂಡ ಲಿ ಶಿ 6–3ರ ಮುನ್ನಡೆ ಸಾಧಿಸಿದರು. ಮತ್ತೊಂದು ನೇರ ಸ್ಮ್ಯಾಷ್ ಮೂಲಕ ಲೀ ಮತ್ತೆ 2 ಅಂಕಗಳನ್ನು ಹೆಚ್ಚಿಸಿಕೊಂಡರು. ಇದಕ್ಕೆ ತಕ್ಕ ತಿರುಗೇಟು ನೀಡಿದ ಶ್ರೀಕಾಂತ್ 402 ಕಿ.ಮೀ ವೇಗದ ಹೊಡೆತ ಪ್ರಯೋಗಿಸಿದರು. ಇದಕ್ಕೂ ಅಳುಕದ ಚೀನಾ ಆಟಗಾರ ಗೇಮ್ ಜಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.