ADVERTISEMENT

Tokyo Olympics| ಕಾಡಲಿದೆ ಈ ಕ್ರೀಡಾ ತಾರೆಗಳ ಅನುಪಸ್ಥಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜುಲೈ 2021, 20:31 IST
Last Updated 22 ಜುಲೈ 2021, 20:31 IST
ರೋಜರ್‌ ಫೆಡರರ್‌
ರೋಜರ್‌ ಫೆಡರರ್‌   

ರೋಜರ್‌ ಫೆಡರರ್‌

ಟೆನಿಸ್‌ ಲೋಕದ ‘ಚಿರ ಯುವಕ’ ರೋಜರ್‌ ಫೆಡರರ್‌ ಈ ಬಾರಿಯ ಒಲಿಂಪಿಕ್ಸ್‌ನಿಂದ ಹಿಂದೆ ಸರಿದಿದ್ದಾರೆ. ಸ್ವಿಟ್ಜರ್ಲೆಂಡ್‌ನ ಈ ದಿಗ್ಗಜ ಆಟಗಾರ ಮೊಣಗಂಟಿನ ನೋವಿನಿಂದಾಗಿ ಈ ನಿರ್ಧಾರ ಕೈಗೊಂಡಿದ್ದಾರೆ.

ವಯಸ್ಸು: 39

ADVERTISEMENT

ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ: 20

ಒಲಿಂಪಿಕ್ಸ್‌ ಸಾಧನೆ: ಸಿಂಗಲ್ಸ್‌ನಲ್ಲಿ ಬೆಳ್ಳಿ (2012), ಡಬಲ್ಸ್‌ನಲ್ಲಿ ಚಿನ್ನ (2008).

ರಫೆಲ್‌ ನಡಾಲ್‌

‘ಕ್ಲೇ ಕೋರ್ಟ್‌ ಕಿಂಗ್‌’ ಖ್ಯಾತಿಯ ರಫೆಲ್‌ ನಡಾಲ್‌ ಕೂಡ ಟೋಕಿಯೊ ಕೂಟದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ‘ದೈಹಿಕ ಆರೋಗ್ಯ ಕಾಪಾಡಿಕೊಂಡು ವೃತ್ತಿ ಜೀವನವನ್ನು ಮತ್ತಷ್ಟು ಸುದೀರ್ಘವಾಗಿಸುವ ದೃಷ್ಟಿಯಿಂದ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿರುವುದಾಗಿ’ ಸ್ಪೇನ್‌ನ ನಡಾಲ್‌ ಇತ್ತೀಚೆಗೆ ಟ್ವೀಟ್‌ ಮಾಡಿದ್ದರು. ಬಹಳಷ್ಟು ಯೋಚಿಸಿಯೇ ಇಂತಹ ಕಠಿಣ ತೀರ್ಮಾನ ತೆಗೆದುಕೊಂಡಿದ್ದಾಗಿ ಹೇಳಿದ್ದರು.

ವಯಸ್ಸು: 35

ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ: 20

ಒಲಿಂಪಿಕ್ಸ್‌ ಸಾಧನೆ: ಸಿಂಗಲ್ಸ್‌ (2008) ಮತ್ತು ಡಬಲ್ಸ್‌ನಲ್ಲಿ (2016) ಚಿನ್ನ.

ಮೊ ಫರಾ

ಬ್ರಿಟನ್‌ನ ‘ಚಿನ್ನ’ ಮೊ ಫರಾ ಈ ಬಾರಿಯ ‘ಕ್ರೀಡಾ ಮೇಳ’ಕ್ಕೆ ಅರ್ಹತೆ ಗಳಿಸಲು ವಿಫಲರಾಗಿದ್ದಾರೆ. ಹೀಗಾಗಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಹ್ಯಾಟ್ರಿಕ್‌ ಸಾಧಿಸುವ ಅವಕಾಶ ಕೈತಪ್ಪಿದೆ. ವಿಶ್ವ ಚಾಂಪಿಯನ್‌ಷಿಪ್‌ವೊಂದರಲ್ಲಿ ಎರಡು ಚಿನ್ನದ ಪದಕ (5,000 ಮತ್ತು 10,000 ಮೀಟರ್ಸ್‌) ಜಯಿಸಿದ ಬ್ರಿಟನ್‌ನ ಮೊದಲ ದೂರ ಅಂತರದ ಓಟಗಾರ ಎಂಬ ಹಿರಿಮೆ ಫರಾ ಅವರದ್ದು.

ವಯಸ್ಸು: 38

ವಿಶ್ವ ಚಾಂಪಿಯನ್‌ಷಿಪ್‌ ಸಾಧನೆ: 6 ಚಿನ್ನ, 2 ಬೆಳ್ಳಿ

ಒಲಿಂಪಿಕ್ಸ್‌ ಸಾಧನೆ: 2012ರಲ್ಲಿ ಎರಡು ಚಿನ್ನ (5,000 ಮತ್ತು 10,000 ಮೀ), 2016ರಲ್ಲೂ ಎರಡು ಚಿನ್ನ.

ಲಿಯಾಂಡರ್‌ ಪೇಸ್‌

‘ಲವ್‌ ಗೇಮ್‌’ ಎಂದೇ ಕರೆಯಲಾಗುವ ಟೆನಿಸ್‌ನ ವಿಶಿಷ್ಠ ರಾಯಭಾರಿ ಲಿಯಾಂಡರ್‌ ಪೇಸ್‌. ಭಾರತದ ಟೆನಿಸ್‌ಗೆ ಹೊಸ ಮೆರಗು ನೀಡಿರುವ ಈ ಧ್ರುವ ತಾರೆ ಟೋಕಿಯೊ ಕೂಟಕ್ಕೆ ಲಭ್ಯರಿಲ್ಲ.

ವಯಸ್ಸು: 48

ಗ್ರ್ಯಾನ್‌ಸ್ಲಾಮ್‌ ಸಾಧನೆ: ಪುರುಷರ ಡಬಲ್ಸ್‌ನಲ್ಲಿ 8, ಮಿಶ್ರಡಬಲ್ಸ್‌ನಲ್ಲಿ 10 ಪ್ರಶಸ್ತಿ.

ಒಲಿಂಪಿಕ್ಸ್‌: ಸಿಂಗಲ್ಸ್‌ ಕಂಚು (1996).

ಸೈನಾ ನೆಹ್ವಾಲ್‌

ಭಾರತದ ಬ್ಯಾಡ್ಮಿಂಟನ್‌ಗೆ ಹೊಸ ದಿಕ್ಕು ತೋರಿದ ಆಟಗಾರ್ತಿ ಸೈನಾ ನೆಹ್ವಾಲ್‌. ಕೋವಿಡ್‌ ಕಾರಣ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಗಳು ರದ್ದುಗೊಂಡಿರುವುದರಿಂದ ಸೈನಾಗೆ ಟೋಕಿಯೊ ಟಿಕೆಟ್‌ ಸಿಕ್ಕಿಲ್ಲ.

ವಯಸ್ಸು: 31

ವಿಶ್ವ ಚಾಂಪಿಯನ್‌ಷಿಪ್‌: ಬೆಳ್ಳಿ (2015), ಕಂಚು (2017)

ಒಲಿಂಪಿಕ್ಸ್‌ ಸಾಧನೆ: ಕಂಚು (2012).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.