ADVERTISEMENT

ಬ್ಯಾಸ್ಕೆಟ್‌ಬಾಲ್‌: ಎಎಸ್‌ಸಿ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2018, 19:39 IST
Last Updated 20 ನವೆಂಬರ್ 2018, 19:39 IST
ಐ.ಬಿ.ಬಿ.ಸಿ (ನೀಲಿ ಪೋಷಾಕು) ಮತ್ತು ಜಿಎಸ್‌ಟಿ ಆ್ಯಂಡ್‌ ಕಸ್ಟಮ್ಸ್‌ ತಂಡಗಳ ಆಟಗಾರರ ಪೈಪೋಟಿಯ ಕ್ಷಣ –ಪ್ರಜಾವಾಣಿ ಚಿತ್ರ
ಐ.ಬಿ.ಬಿ.ಸಿ (ನೀಲಿ ಪೋಷಾಕು) ಮತ್ತು ಜಿಎಸ್‌ಟಿ ಆ್ಯಂಡ್‌ ಕಸ್ಟಮ್ಸ್‌ ತಂಡಗಳ ಆಟಗಾರರ ಪೈಪೋಟಿಯ ಕ್ಷಣ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಲವಾನ್‌ ಅವರ ಅಮೋಘ ಆಟದ ನೆರವಿನಿಂದ ಎಎಸ್‌ಸಿ ತಂಡ ರಾಜ್ಯ ಅಸೋಸಿಯೇಷನ್‌ ಕಪ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದೆ.

ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪುರುಷರ ವಿಭಾಗದ ಹಣಾಹಣಿಯಲ್ಲಿ ಎಎಸ್‌ಸಿ 62–44 ಪಾಯಿಂಟ್ಸ್‌ನಿಂದ ರಾಜಮಹಲ್‌ ಕ್ಲಬ್‌ ತಂಡವನ್ನು ಸೋಲಿಸಿತು.

ಮೊದಲಾರ್ಧದಲ್ಲಿ 28–24ರಿಂದ ಮುನ್ನಡೆ ಗಳಿಸಿದ್ದ ಎಎಸ್‌ಸಿ ತಂಡ ವಿರಾಮದ ನಂತರವೂ ಪರಿಣಾಮಕಾರಿ ಸಾಮರ್ಥ್ಯ ತೋರಿತು. ಎಎಸ್‌ಸಿ ತಂಡದ ಬಲವಾನ್‌ 31 ಪಾಯಿಂಟ್ಸ್‌ ಗಳಿಸಿ ಮಿಂಚಿದರು. ರಾಜಮಹಲ್‌ ತಂಡದ ಗೌತಮ್‌ 15 ಪಾಯಿಂಟ್ಸ್‌ ಕಲೆಹಾಕಿದರು.

ADVERTISEMENT

ಇನ್ನೊಂದು ಪಂದ್ಯದಲ್ಲಿ ಮೈಸೂರು ಕ್ಲಬ್‌ 37–30ರಿಂದ ಕೆಎಸ್‌ಪಿ ಮೇಲೆ ಗೆದ್ದಿತು. ವಿಜಯೀ ತಂಡದ ಬಾಲು 16 ಪಾಯಿಂಟ್ಸ್‌ ಸಂಗ್ರಹಿಸಿದರು.

ಇತರ ಪಂದ್ಯಗಳಲ್ಲಿ ಸದರ್ನ್‌ ಬ್ಲೂಸ್‌ 49–32ರಲ್ಲಿ ಸಹಕಾರನಗರ ಕ್ಲಬ್‌ ಎದುರೂ, ಎಂಸಿಎಚ್‌ಎಸ್‌ 60–58ರಲ್ಲಿ ಬಾಷ್‌ ಮೇಲೂ, ಬೀಗಲ್ಸ್‌ ಕ್ಲಬ್‌ 65–33ರಲ್ಲಿ ಅಪ್ಪಯ್ಯ ಕ್ಲಬ್‌ ವಿರುದ್ಧವೂ, ಕೋರಮಂಗಲ ಕ್ಲಬ್‌ 57–53ರಲ್ಲಿ ಬೆಳಗಾವಿ ಕ್ಲಬ್‌ ಮೇಲೂ, ಡಿವೈಇಎಸ್‌ ಬೆಂಗಳೂರು 56–35ರಲ್ಲಿ ವಿವೇಕ್ಸ್‌ ಕ್ಲಬ್‌ ಎದುರೂ, ಜಿಎಸ್‌ಟಿ ಆ್ಯಂಡ್‌ ಕಸ್ಟಮ್ಸ್‌ 75–66ರಲ್ಲಿ ಐ.ಬಿ.ಬಿ.ಸಿ ಮೇಲೂ, ದೇವಾಂಗ ಯೂನಿಯನ್‌ 62–48ರಲ್ಲಿ ಬಿಎಸ್‌ಎನ್‌ಎಲ್‌ ಎದುರೂ, ಸಿ.ಎಂ.ಪಿ 59–25ರಲ್ಲಿ ಬಿಇಎಂಎಲ್‌ ಮೈಸೂರು ಮೇಲೂ, ಭಾರತ್‌ ಕ್ಲಬ್‌ 54–46ರಲ್ಲಿ ಜೆಎಸ್‌ಸಿ ವಿರುದ್ಧವೂ ವಿಜಯಿಯಾದವು.

ಮಹಿಳಾ ವಿಭಾಗದ ಪಂದ್ಯದಲ್ಲಿ ಡಿವೈಇಎಸ್‌ ಮೈಸೂರು ತಂಡ 38–21ರಲ್ಲಿ ಡಿವೈಇಎಸ್‌ ಮಂಡ್ಯ ತಂಡದ ವಿರುದ್ಧ ಗೆದ್ದಿತು.

ಮೈಸೂರು ತಂಡದ ಮೇಘನಾ 16 ಪಾಯಿಂಟ್ಸ್‌ ಕಲೆಹಾಕಿದರು. ಮೊದಲಾರ್ಧದ ಅಂತ್ಯಕ್ಕೆ 26–9ರಿಂದ ಮುಂದಿದ್ದ ಈ ತಂಡ ನಂತರವೂ ಗುಣಮಟ್ಟದ ಆಟ ಆಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.