ಬೆಂಗಳೂರು: ಎಸ್. ಶಿವಲೀಲಾ ಕರ್ನಾಟಕ ರಾಜ್ಯ ನೆಟ್‌ಬಾಲ್ ಮಹಿಳೆಯರ ತಂಡದ ನಾಯಕಿಯಾಗಿ ನೇಮಕವಾಗಿದ್ದಾರೆ.
ನವದೆಹಲಿಯಲ್ಲಿ ಆಯೋಜಿಸಲಾಗಿರುವ 12ನೇ ಫೆಡರೇಷನ್ ಕಪ್ ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಈ ತಂಡವು ಸ್ಪರ್ಧಿಸಲಿದೆ.
ಕರ್ನಾಟಕ ಅಮೇಚೂರ್ ನೆಟ್‌ಬಾಲ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಿ. ಗಿರೀಶ ಪ್ರಕಟಿಸಿರುವ ತಂಡ ಇಂತಿದೆ; ಎಸ್. ಶಿವಲೀಲಾ (ನಾಯಕಿ), ಕವನಾ ಎಂ ಗೌಡ (ಉಪನಾಯಕಿ), ಕೆ. ಶಾಲಿನಿ, ಕೆ.ಎಸ್. ಗಗನಾ, ಎ. ಗಗನಾ, ದಿಶಾ ಎ ಗೌಡ, ಬಿ.ಆರ್. ಸುರಭಿ, ರಂಜನಾ, ಎಚ್. ಮನಸ್ವಿ, ಎಂ. ಶ್ರೇಯಾ, ಕೆ.ಆರ್. ಖುಷಿ, ಎ. ಡೆಲ್ಸಿಯಾ ಶೆರ್ಲಿ. ಎಚ್.ಡಿ. ಪುರುಷೋತ್ತಮ (ಕೋಚ್), ಕೆ.ಎಸ್. ತೇಜಸ್ವಿನಿ (ಮ್ಯಾನೇಜರ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.