ಬೆಂಗಳೂರು: ಅಥರ್ವ ನವರಂಗೆ ಹಾಗೂ ಹಿಮಾಂಶಿ ಚೌಧರಿ ಅವರು ಇಲ್ಲಿ ನಡೆಯುತ್ತಿರುವ ರಾಜ್ಯ ರ್‍ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ 17 ವರ್ಷದೊಳಗಿನವರ ವಿಭಾಗದಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ಸಿಂಗಲ್ಸ್ ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿದರು.
ವಿ.ವಿ.ಪುರಂನ ಮ್ಯಾಚ್ ಪಾಯಿಂಟ್ ಅಕಾಡೆಮಿಯಲ್ಲಿ ನಡೆದ ಟೂರ್ನಿಯ ಬಾಲಕರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ, ಅಥರ್ವ ನವರಂಗೆ ಅವರು 11–8, 12–10, 11–6ರಿಂದ ಗೌರವ್ ಗೌಡ ಅವರನ್ನು ಸುಲಭವಾಗಿ ಮಣಿಸಿದರು.
ಸೆಮಿಫೈನಲ್ ಪಂದ್ಯಗಳಲ್ಲಿ ಗೌರವ್ ಗೌಡ 11–8, 11–7, 11–9 ರಿಂದ ಸಿದ್ಧಾರ್ಥ ಧರಿವಾಲ್ ಅವರನ್ನು ಸೋಲಿಸಿದರೆ, ಅಥರ್ವ 9–11, 12–10, 8–11, 11–4, 11–6 ರಿಂದ ಆರ್ಣವ್ ಎನ್. ಅವರನ್ನು ಹಿಮ್ಮೆಟ್ಟಿಸಿದರು.
ತೀವ್ರ ಪೈಪೋಟಿಯಿಂದ ಕೂಡಿದ್ದ ಬಾಲಕಿಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಹಿಮಾಂಶಿ ಅವರು 11–4, 12–10, 5–11, 9–11, 11–4ರಿಂದ ಹಿಯಾ ಸಿಂಗ್ ಅವರನ್ನು ಸೋಲಿಸಿದರು.
ಸೆಮಿಫೈನಲ್ ಪಂದ್ಯಗಳಲ್ಲಿ ಹಿಮಾಂಶಿ ಅವರು 5–11, 3–11, 11–5, 11–2, 11–9 ರಿಂದ ಶಿವಾನಿ ಮಹೇಂದ್ರನ್ ವಿರುದ್ಧ ಹಾಗೂ ಹಿಯಾ ಸಿಂಗ್ ಅವರು 11–3, 11–2, 11–6 ರಿಂದ ಪ್ರೇಕ್ಷಾ ಟಿ. ತಿಲಾವತ್ ಅವರ ಎದುರು ಜಯಸಾಧಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.