ADVERTISEMENT

ಯೂತ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್: ಬೆಂಗಳೂರು ಸ್ಪೋರ್ಟಿಂಗ್‌ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2025, 16:17 IST
Last Updated 16 ಮಾರ್ಚ್ 2025, 16:17 IST
.
.   

ಬೆಂಗಳೂರು: ಸಾಯಿ ಸಂತೋಷ್‌ ಅವರ ಆಟದ ಬಲದಿಂದ ಬೆಂಗಳೂರು ಸ್ಪೋರ್ಟಿಂಗ್‌ ತಂಡವು ರಾಜ್ಯ ಯೂತ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ರೋಚಕ ಹಣಾಹಣಿಯಲ್ಲಿ 23–21 ಅಂಕಗಳಿಂದ ಓರಿಯನ್ಸ್‌ ಬಿ.ಸಿ ತಂಡವನ್ನು ಮಣಿಸಿತು.

ಬಸವನಗುಡಿಯ ಎಂ.ಎನ್‌.ಕೆ ರಾವ್‌ ಪಾರ್ಕ್‌ನ ಬ್ಯಾಸ್ಕೆಟ್‌ಬಾಲ್‌ ಕೋರ್ಟ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಎರಡನೇ ದಿನವಾದ ಭಾನುವಾರ ಬಾಲಕರ ವಿಭಾಗದಲ್ಲಿ  ಸ್ಪೋರ್ಟಿಂಗ್‌ ತಂಡವು ಮಧ್ಯಂತರದ ವೇಳೆಗೆ 9–10ರಿಂದ ಹಿನ್ನಡೆಯಲ್ಲಿತ್ತು. ನಂತರ ಚುರುಕಿನ ಆಟವಾಡಿ ಮೇಲುಗೈ ಸಾಧಿಸಿತು. ಸಾಯಿ ಸಂತೋಷ್‌ 10 ಅಂಕ ಗಳಿಸಿದರೆ, ಓರಿಯನ್ಸ್‌ನ ರಾಘವ್‌ 13 ಪಾಯಿಂಟ್ಸ್‌ ಕಲೆ ಹಾಕಿದರು.

ಬಾಲಕಿಯರ ವಿಭಾಗದಲ್ಲಿ ಆತಿಥೇಯ ಎಂ.ಎನ್‌.ಕೆ. ರಾವ್‌ ಬಿ.ಸಿ ತಂಡವು ಶ್ರೀನಿಧಿ (18) ಮತ್ತು ಹಿಯಾ ಜೈನ್‌ (10) ಅವರ ಆಟದ ನೆರವಿನಿಂದ 43–32ರಿಂದ ಎಚ್‌ಬಿಆರ್‌ ಬಿ.ಸಿ ತಂಡವನ್ನು ಸೋಲಿಸಿತು. ಎಚ್‌ಬಿಆರ್‌ ತಂಡದ ದಿಯಾ 17 ಅಂಕ ಗಳಿಸಿದರು.

ADVERTISEMENT

ಬಾಲಕರ ಫಲಿತಾಂಶ: ಮೌಂಟ್ಸ್‌ ಬಿ.ಸಿ (ದಕ್ಷಾ 10) 38–8ರಿಂದ ಬಿಸಿವೈಎ ಬಿ.ಸಿ ವಿರುದ್ಧ; ಕೋಲಾರ ಜಿಲ್ಲೆ (ವಿಶಾಲ್‌ 10, ಕೃಷಿ 11) 46–7ರಿಂದ ಯಂಗ್‌ ಬುಲ್ಸ್‌ ವಿರುದ್ಧ; ವೈಎಂಎಂಎ ಬಿ.ಸಿ (ಶಂಕರ್‌ 39) 57–23ರಿಂದ ಧಾರವಾಡ ಜಿಲ್ಲೆ ಎ ವಿರುದ್ಧ; ಎ.ವಿ. ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ (ಶ್ರೀಕರ 12) 32–10ರಿಂದ ರಾಜ್‌ಮಹಲ್‌ ಬಿ.ಸಿ ವಿರುದ್ಧ; ವಿಮಾನಪುರ ಬಿ.ಸಿ 41–22ರಿಂದ ಹೊಸಕೋಟೆ ಬಿ.ಸಿ ವಿರುದ್ಧ ಜಯ ಸಾಧಿಸಿದವು.

ಎಚ್‌ಬಿಆರ್‌ ಬಿ.ಸಿ (ರಿಶಿತ್‌ ಬಿ 13) 33–8ರಿಂದ ನೆಟ್ಟಕಲ್ಲಪ್ಪ ಬಿ.ಸಿ ವಿರುದ್ಧ; ಮೈಸೂರು ಜಿಲ್ಲೆ ಎ (ಕುಶಾಲ್‌ ಸಿಂಗ್ 23) 47–24ರಿಂದ ವಿವೇಕ್ಸ್‌ ಎಸ್‌.ಸಿ ವಿರುದ್ಧ; ಕೋರಮಂಗಲ ಬಿ.ಸಿ (ಅಚ್ಯುತ್ 16) 70–28ರಿಂದ ಜೆಎಸ್‌ಸಿ (ಜ್ಯೇಷ್ಠಾ 19) ವಿರುದ್ಧ; ಎಂಸಿಎಚ್‌ಎಸ್‌ ಬಿ.ಸಿ (ಪಾರಿತೋಷ್‌ 18) 56–32ರಿಂದ ಧಾರವಾಡ ಜಿಲ್ಲೆ ಬಿ (ಪ್ರೀತಂ 10) ವಿರುದ್ಧ ಗೆಲುವು ಸಾಧಿಸಿದವು.

ಬಾಲಕಿಯರ ಫಲಿತಾಂಶ: ವಿವೇಕ್ಸ್‌ ಬಿ.ಸಿ (ರುತ್‌ 15, ಆಧ್ಯಾ 10) 40–12ರಿಂದ ಕೋರಮಂಗಲ ಬಿ.ಸಿ ಎದುರು; ಜೆಎಸ್‌ಸಿ 27–16ರಿಂದ ದಕ್ಷಿಣ ಕನ್ನಡ ಜಿಲ್ಲೆ ಎದುರು; ಬಿಸಿವೈಎ (ಕೃಷಿ 10) 24–7 ಧಾರವಾಡ ಜಿಲ್ಲೆ ಎ ಎದುರು; ಪಿಪಿಸಿ (ನಿತ್ಯಾ 11) 44–29ರಿಂದ ಮೈಸೂರು ಜಿಲ್ಲೆ ಬಿ ಎದುರು; ಧಾರವಾಡ ಜಿಲ್ಲೆ ಬಿ 20–11ರಿಂದ ಓರಿಯನ್ಸ್‌ ಬಿ.ಸಿ ಎದುರು; ಯಂಗ್‌ ಓರಿಯನ್ಸ್ ಬಿ.ಸಿ (ಲೀನ್ಶಾ 13) 33–12ರಿಂದ ಅಪ್ಪಯ್ಯ ಬಿ.ಸಿ ಎದುರು; ಮೈಸೂರು ಜಿಲ್ಲೆ ಎ (ಆಂಚಲ್ 21) 41-15ರಿಂದ ಸದರ್ನ್‌ ಬ್ಲೂಸ್‌ ಎದುರು ಜಯ ಸಾಧಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.