ನವದೆಹಲಿ: ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಚಾಂಪಿಯನ್ ನಿತೇಶ್ ಕುಮಾರ್ ಮತ್ತು ಸುಕಾಂತ್ ಕದಂ ಅವರು ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್‌ನ್ಯಾಷನಲ್ ಟೂರ್ನಿಯಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ.
ನಿತೇಶ್ ಅವರು ಎಸ್‌ಎಲ್ 3 ವಿಭಾಗದ ಫೈನಲ್‌ನಲ್ಲಿ 21–19, 21–19 ರಿಂದ ಜಪಾನ್‌ನ ದೈಸುಕೆ ಫುಜಿಹಾರ ಅವರನ್ನು ಸೋಲಿಸಿದರು. ಸುಕಾಂತ್ ಅವರು ಎಸ್‌ಎಲ್4 ವಿಭಾಗದ ಫೈನಲ್‌ನಲ್ಲಿ 21–13, 21–10 ರಿಂದ ಸ್ವದೇಶದ ತರುಣ್ ಅವರನ್ನು ಹಿಮ್ಮೆಟ್ಟಿಸಿದರು.
ಎಸ್‌ಎಚ್ 6 ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ನಿತ್ಯಶ್ರೀ ಅವರು ಪೋಲೆಂಡ್‌ನ ಸ್ಮಿಜೀಲ್ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದರು.
ಪುರುಷರ ಡಬಲ್ಸ್‌ನಲ್ಲಿ ನಿತೇಶ್ ಕುಮಾರ್– ತರುಣ್ ಜೋಡಿ 21–14, 23–25, 22–20ರಲ್ಲಿ ಜಗದೀಶ್ ದಿಲ್ಲಿ– ನವೀನ್ ಶಿವಕುಮಾರ್ ಜೋಡಿಯನ್ನು ಮಣಿಸಿ ಚಾಂಪಿಯನ್ ಎನಿಸಿದರು.
ಎಸ್‌ಎಚ್ 6 ಮಿಶ್ರ ಡಬಲ್ಸ್‌ನಲ್ಲಿ ಭಾರತ ಜಯಭೇರಿ ಬಾರಿಸಿತು. ಕೃಷ್ಣ ನಗರ್– ನಿತ್ಯಶ್ರೀ ಫೈನಲ್‌ನಲ್ಲಿ ಇಂಗ್ಲೆಂಡ್‌ನ ಶೆಫರ್ಡ್– ಚೂಂಗ್ ಜೋಡಿಯನ್ನು 21–14, 21–11 ರಿಂದ ಸೋಲಿಸಿತು.
ನಿತೇಶ್ ಕುಮಾರ್– ಮನಿಷಾ ರಾಮದಾಸ್ ಜೋಡಿ ಎಸ್‌ಎಲ್ಎ–ಎಸ್‌ಯು 5 ವಿಭಾಗದ ಅಂತಿಮ ಪಂದ್ಯದಲ್ಲಿ 21–9, 21–15 ರಿಂದ ಸ್ವೀಡನ್‌ನ ರಿಕಾಡ್ ನೀಲ್ಸನ್– ಡೆನ್ಮಾರ್ಕ್‌ನ ಹೆಲ್ಲೊ ಸೋಫಿ ಸಗೋಜ್ ಜೋಡಿಯನ್ನು ಪರಾಭವಗೊಳಿಸಿ ಭಾರತದ ಖಾತೆಗೆ ಇನ್ನೊಂದು ಚಿನ್ನ ಸೇರಿಸಿತು.
ಮಹಿಳೆಯರ ಸಿಂಗಲ್ಸ್ ಫೈನಲ್ಸ್‌ನಲ್ಲಿ ಅಲ್ಫಿಯಾ ಜೇಮ್ಸ್ ತೀವ್ರ ಹೋರಾಟ ನೀಡಿದರೂ, ಅಂತಿಮವಾಗಿ ಸ್ವಿಜರ್ಲೆಂಡ್‌ಗನ ಐಲೇರರಿಯಾ ಒಲ್ಜಿಯಾಟಿ ಅವರಿಗೆ ಸೋತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.