ADVERTISEMENT

ಹಾಕಿ: ಭಾರತ ತಂಡಕ್ಕೆ ಬೆಳ್ಳಿಯ ಪದಕ

ಪಿಟಿಐ
Published 13 ಅಕ್ಟೋಬರ್ 2018, 18:39 IST
Last Updated 13 ಅಕ್ಟೋಬರ್ 2018, 18:39 IST
ಬ್ರಿಟನ್‌ ಎದುರಿನ ಪಂದ್ಯದಲ್ಲಿ ಭಾರತದ ಆಟಗಾರ ಚೆಂಡಿನೊಂದಿಗೆ ಗುರಿಯತ್ತ ಮುನ್ನುಗ್ಗಿದರು –ಪಿಟಿಐ ಚಿತ್ರ
ಬ್ರಿಟನ್‌ ಎದುರಿನ ಪಂದ್ಯದಲ್ಲಿ ಭಾರತದ ಆಟಗಾರ ಚೆಂಡಿನೊಂದಿಗೆ ಗುರಿಯತ್ತ ಮುನ್ನುಗ್ಗಿದರು –ಪಿಟಿಐ ಚಿತ್ರ   

ಜೋಹರ್‌ ಬಹ್ರು, ಮಲೇಷ್ಯಾ: ಭಾರತದ ಜೂನಿಯರ್‌ ಪುರುಷರ ತಂಡದವರು 18 ವರ್ಷದೊಳಗಿನವರ ಸುಲ್ತಾನ್‌ ಜೋಹರ್‌ ಕಪ್‌ ಹಾಕಿ ಟೂರ್ನಿಯಲ್ಲಿ ಬೆಳ್ಳಿಯ ಪದಕ ಗೆದ್ದಿದ್ದಾರೆ.

ಶನಿವಾರ ನಡೆದ ಫೈನಲ್‌ನಲ್ಲಿ ಭಾರತ 2–3 ಗೋಲುಗಳಿಂದ ಬಲಿಷ್ಠ ಬ್ರಿಟನ್‌ ತಂಡಕ್ಕೆ ಮಣಿಯಿತು.

ಹಿಂದಿನ ಆವೃತ್ತಿಯಲ್ಲಿ ಕಂಚಿನ ಸಾಧನೆ ಮಾಡಿದ್ದ ಭಾರತ ತಂಡ ಮೊದಲ ಕ್ವಾರ್ಟರ್‌ನಲ್ಲಿ ಅಮೋಘ ಆಟ ಆಡಿತು. ನಾಲ್ಕನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ವಿಷ್ಣುಕಾಂತ್‌ ಸಿಂಗ್‌ ಚೆಂಡನ್ನು ಗುರಿ ಮುಟ್ಟಿಸಿದರು. ಏಳನೇ ನಿಮಿಷದಲ್ಲಿ ಡೇನಿಯಲ್‌ ವೆಸ್ಟ್‌, ಫೀಲ್ಡ್‌ ಗೋಲು ದಾಖಲಿಸಿ 1–1ರ ಸಮಬಲಕ್ಕೆ ಕಾರಣರಾದರು.

ADVERTISEMENT

ಮೂರನೇ ಕ್ವಾರ್ಟರ್‌ನಲ್ಲಿ ಬ್ರಿಟನ್‌ ಪಾರಮ್ಯ ಮೆರೆಯಿತು. ಈ ತಂಡದ ಜೇಮ್ಸ್‌ ಓಟೆಸ್‌ 39 ಮತ್ತು 42ನೇ ನಿಮಿಷಗಳಲ್ಲಿ ಕೈಚಳಕ ತೋರಿ ಅಭಿಮಾನಿಗಳನ್ನು ರಂಜಿಸಿದರು. ಹೀಗಾಗಿ ತಂಡ 3–1ರ ಮುನ್ನಡೆ ಗಳಿಸಿ ಪಂದ್ಯದ ಮೇಲಿನ ಹಿಡಿತ ಬಿಗಿ ಮಾಡಿಕೊಂಡಿತು.

ನಿರ್ಣಾಯಕ ಎನಿಸಿದ್ದ ನಾಲ್ಕನೇ ಕ್ವಾರ್ಟರ್‌ನಲ್ಲಿ ಭಾರತ ತಂಡ ಏಕೈಕ ಗೋಲು ದಾಖಲಿಸಲಷ್ಟೇ ಶಕ್ತವಾಯಿತು. ಹೀಗಾಗಿ ಚಿನ್ನದ ಪದಕದ ಕನಸು ಕಮರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.