ADVERTISEMENT

ಟಿಟಿ: ಮೂರೂ ಸ್ಥಾನ ಕರ್ನಾಟಕದ ಪಾಲು

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2019, 18:26 IST
Last Updated 29 ಮಾರ್ಚ್ 2019, 18:26 IST
ರಾಷ್ಟ್ರೀಯ ಪ್ಯಾರಾ ಟೇಬಲ್‌ ಟೆನಿಸ್ ಚಾಂಪಿಯನ್‌ಷಿಪ್‌ನ ಕ್ಲಾಸ್‌–7 ವಿಭಾಗದಲ್ಲಿ ಪದಕ ಗೆದ್ದವರು
ರಾಷ್ಟ್ರೀಯ ಪ್ಯಾರಾ ಟೇಬಲ್‌ ಟೆನಿಸ್ ಚಾಂಪಿಯನ್‌ಷಿಪ್‌ನ ಕ್ಲಾಸ್‌–7 ವಿಭಾಗದಲ್ಲಿ ಪದಕ ಗೆದ್ದವರು   

ಹುಬ್ಬಳ್ಳಿ: ಮಧ್ಯಪ್ರದೇಶದ ಇಂದೋರ್‌ನಲ್ಲಿ ಶುಕ್ರವಾರ ನಡೆದ 2ನೇ ರಾಷ್ಟ್ರೀಯ ಪ್ಯಾರಾ ಟೇಬಲ್‌ ಟೆನಿಸ್ ಚಾಂಪಿಯನ್‌ಷಿಪ್‌ನ ಕ್ಲಾಸ್‌–7 ವಿಭಾಗದಲ್ಲಿ ಮೊದಲ ಮೂರೂ ಸ್ಥಾನಗಳನ್ನು ಕರ್ನಾಟಕದ ಸ್ಪರ್ಧಿಗಳು ಪಡೆದುಕೊಂಡಿದ್ದಾರೆ.

ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಬೆಳಗಾವಿಯ ಸಂಜೀವ ಹಮ್ಮನವರ 3–1ರಲ್ಲಿ ವಿಜಯಪುರದ ಸಂಜೀವ ಹಜೇರಿ ಎದುರು ಗೆಲುವು ಪಡೆದು ಚಿನ್ನದ ಪದಕ ಪಡೆದರು. ಬೆಳ್ಳಿ ಸಂಜೀವ ಪಾಲಾಯಿತು.

ಮೂರನೇ ಸ್ಥಾನಕ್ಕೆ ನಡೆದ ಹಣಾಹಣಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಾ. ಎ.ವಿ. ಬಾಳಿಗಾ ಕಾಲೇಜಿನ ವಿದ್ಯಾರ್ಥಿ ಡಾ. ನಾಜೀಮ್ ಖಾನ್‌ 9–11, 11–7. 11–5, 5–11, 11–13ರಲ್ಲಿ ಸಂಜೀವ ಹಜೇರಿ ಎದುರು ಪರಾಭವಗೊಂಡು ಕಂಚಿಗೆ ಸಮಾಧಾನ ಪಟ್ಟುಕೊಂಡರು. ಇನ್ನೊಂದು ಕಂಚು ದೆಹಲಿಯ ಸಾರಿಕ್‌ ನಿಯಾಮ್‌ ಪಾಲಾಯಿತು. ನಾಜೀಮ್‌ ಹುಬ್ಬಳ್ಳಿಯಲ್ಲಿ ಮಹಾರಾಷ್ಟ್ರ ಮಂಡಳ ಟೇಬಲ್‌ ಟೆನಿಸ್‌ ಕ್ಲಬ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.