ADVERTISEMENT

ಟೇಬಲ್ ಟೆನಿಸ್‌: ಯಶಸ್ವಿನಿಗೆ ಕಂಚು

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 21:23 IST
Last Updated 15 ಆಗಸ್ಟ್ 2022, 21:23 IST
ಯಶಸ್ವಿನಿ ಘೋರ್ಪಡೆ
ಯಶಸ್ವಿನಿ ಘೋರ್ಪಡೆ   

ಬೆಂಗಳೂರು: ಕರ್ನಾಟಕದ ಯಶಸ್ವಿನಿ ಘೋರ್ಪಡೆ ಅವರು ಸ್ವೀಡನ್‌ನಲ್ಲಿ ನಡೆದ ಡಬ್ಲ್ಯುಟಿಟಿ ಯೂತ್ ಕಂಟೆಂಡರ್‌ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕಂಚಿನ ಪದಕ ಜಯಿಸಿದ್ದಾರೆ.

ಭಾನುವಾರ ನಡೆದ 19 ವರ್ಷದೊಳಗಿನವರ ವಿಭಾಗದ ಸೆಮಿಫೈನಲ್‌ನಲ್ಲಿ ಯಶಸ್ವಿನಿ 11–9, 7–11, 9–11, 4–11ರಿಂದ ದಕ್ಷಿಣ ಕೊರಿಯಾದ ಕಿಮ್‌ ಸಿಯೊಂಗ್ ಜಿನ್ ಎದುರು ಸೋತರು.

ಮೊದಲ ಗೇಮ್‌ ಗೆದ್ದ ಅವರು ಬಳಿಕದ ಮೂರು ಗೇಮ್‌ಗಳಲ್ಲಿ ನಿರಾಸೆ ಅನುಭವಿಸಿದರು.

ADVERTISEMENT

ಇದಕ್ಕೂ ಮೊದಲು ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಯಶಸ್ವಿನಿ11-7,10-12,15-13,11-6ರಿಂದ ಭಾರತದದವರೇ ಆದ ಪ್ರಿತಾ ಪ್ರಿಯಾ ಎದುರು ಗೆದ್ದಿದ್ದರು. ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ8-11,11-8,13-11,13-11ರಿಂದ ಚೀನಾ ತೈಪೆಯ ಹುವಾಂಗ್‌ ಯು ಜಿ ಎದುರು ಜಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.