ಬೆಂಗಳೂರು: ರೆಯಾಂಶ್ ಜಲನ್ ಹಾಗೂ ತನಿಷ್ಕಾ ಕಪಿಲ್ ಕಾಲಭೈರವ ಅವರು ಕರ್ನಾಟಕ ಸರ್ಕಾರದ ಸಚಿವಾಲಯ (ಕೆಜಿಎಸ್) ಕ್ಲಬ್ ಆಯೋಜಿಸಿರುವ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 15 ವರ್ಷದೊಳಗಿನವರ ಬಾಲಕ ಮತ್ತು ಬಾಲಕಿಯರ ವಿಭಾಗದ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡರು.
ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ, ತನಿಷ್ಕಾ 11–6, 8–1, 11–5, 11–3ರಿಂದ ಸಾಕ್ಷ್ಯಾ ಸಂತೋಷ್ ಎದುರು ಗೆಲುವು ಸಾಧಿಸಿದರು.
ಸೆಮಿಫೈನಲ್ ಪಂದ್ಯಗಳಲ್ಲಿ ತನಿಷ್ಕಾ 11–8, 11–4, 12–10 ನೇರ ಸೆಟ್‌ಗಳಿಂದ ರಾಶಿ ವಿ. ರಾವ್ ವಿರುದ್ಧ; ಸಾಕ್ಷ್ಯಾ 6–11, 11–3, 11–5, 9–11, 11–9ರಿಂದ ಇರೆನ್ ಅನ್ನಾ ಸುಭಾಷ್ ವಿರುದ್ಧ ಜಯಿಸಿದ್ದರು.
ನಾನ್ ಮೆಡಲಿಸ್ಟ್ ಸಿಂಗಲ್ಸ್ ಫೈನಲ್‌ನಲ್ಲಿ ತನಿಷ್ಕಾ 13–11, 12–10, 11–9ರ ನೇರ ಸೆಟ್‌ಗಳಿಂದ ಶುಭಂ ದ್ವಿವೇದಿ ಅವರನ್ನು ಮಣಿಸಿದರು. ಇದಕ್ಕೂ ಮೊದಲು, 17 ವರ್ಷ ಮತ್ತು 19 ವರ್ಷದೊಳಗಿನವರ ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದಿದ್ದ ತನಿಷ್ಕಾ ಅವರು ಟೂರ್ನಿಯಲ್ಲಿ ಒಟ್ಟು ನಾಲ್ಕು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.
ಬಾಲಕರ ಫೈನಲ್‌ನಲ್ಲಿ ರೆಯಾಂಶ್ 11–7, 11–4, 10–12, 12–14, 11–5ರಿಂದ ಸಿದ್ಧಾಂತ್ ಎಂ. ಅವರನ್ನು ಸೋಲಿಸಿದರು. ಸೆಮಿಫೈನಲ್ ಪಂದ್ಯಗಳಲ್ಲಿ ರೆಯಾಂಶ್ 11–5, 11–6, 11–4ರ ನೇರ ಸೆಟ್‌ಗಳಿಂದ ಪ್ರಥಮ್ ವಿ. ರಾವ್ ಎದುರು; ಸಿದ್ಧಾಂತ್ 11–8, 11–9, 11–9ರ ನೇರ ಸೆಟ್‌ಗಳಿಂದ ಆದ್ಯೋತ್ ಯು. ಎದುರು ಗೆಲುವು ಸಾಧಿಸಿದ್ದರು.
ನಾನ್ ಮೆಡಲಿಸ್ಟ್ ಡಬಲ್ಸ್ ಫೈನಲ್‌ನಲ್ಲಿ ಸಿದ್ಧಾಂತ್ ಧಾರಿವಾಲ್ ಹಾಗೂ ವೇದಾಂತ್ ವಸಿಷ್ಠ ಜೋಡಿಯು 11–7, 8–11, 11–5, 11–7ರಿಂದ ಸಂಜಯ್ ಅಯ್ಯಂಗಾರ್ ಹಾಗೂ ಕಿಶನ್ ಶೆಟ್ಟಿ ಜೋಡಿಯನ್ನು ಪರಾಭವಗೊಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.