ADVERTISEMENT

ವಿಶ್ವ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್: 3ನೇ ಸುತ್ತಿಗೆ ತಸ್ನಿಂ ಮಿರ್‌

ಪಿಟಿಐ
Published 8 ಅಕ್ಟೋಬರ್ 2019, 16:21 IST
Last Updated 8 ಅಕ್ಟೋಬರ್ 2019, 16:21 IST

ಕಜಾನ್‌, ರಷ್ಯಾ: ಬಿಡಬ್ಲ್ಯುಎಫ್ ವಿಶ್ವ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಶಟ್ಲರ್‌ಗಳು ಉತ್ತಮ ಸಾಮರ್ಥ್ಯ ಮುಂದುವರಿಸಿದ್ದಾರೆ. ಚಾಂಪಿಯನ್‌ಷಿಪ್‌ನ ಎರಡನೇ ದಿನವಾದ ಮಂಗಳವಾರ ತಸ್ನಿಂ ಮಿರ್‌ ಮೂರನೇ ಸುತ್ತಿಗೆ ಕಾಲಿಟ್ಟರೆ, ಮಿಕ್ಸೆಡ್‌ ಡಬಲ್ಸ್ ಜೋಡಿ ಇಶಾನ್‌ ಭಟ್ನಾಗರ್‌–ತನಿಷಾ ಕ್ರಾಸ್ಟೊ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿತು.

ಮಿಕ್ಸೆಡ್‌ ಡಬಲ್ಸ್‌ ವಿಭಾಗದಲ್ಲಿಯೇ ಭಾರತದ ಸತೀಶ್‌ ಕುಮಾರ್‌– ರಮ್ಯಾ ವೆಂಕಟೇಶ್‌ ಜೋಡಿ ಕೂಡ ಎರಡನೇ ಸುತ್ತಿಗೆ ಮುನ್ನಡೆದಿದೆ.

ಮಿಕ್ಸೆಡ್‌ ಡಬಲ್ಸ್‌ನಲ್ಲಿ ಸತೀಶ್‌ ಕುಮಾರ್‌–ರಮ್ಯಾ ವೆಂಕಟೇಶ್‌ ಜೋಡಿಯು ಸ್ಕಾಟ್ಲೆಂಡ್‌ನ ಜೋಷುವಾ ಅಪಿಲಿಗಾ–ರಾಚೆಲ್‌ ಸಗ್‌ಡೆನ್‌ ಎದುರು 21–9, 21–8ರಿಂದ ಗೆಲುವು ಸಾಧಿಸಿದರು.

ADVERTISEMENT

ತನಿಷಾ–ಇಶಾನ್‌ ಅವರು ಇಟಲಿಯ ಎನ್ರಿಚೊ ಬರೊನಿ–ಚಿಯಾರಾ ಪ್ಯಾಸೆರಿ ಎದುರು 21–12, 21–10ರಿಂದ ಗೆದ್ದರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ತಸ್ನಿಂ ಅವರು ಫಿನ್ಲೆಂಡ್‌ನ ಟೂಲಿ ವಾಸಿಕ್ಕನೆಮಿ ವಿರುದ್ಧ 21–4, 21–8ರಿಂದ ಜಯಿಸಿದರು.

ಅದಿತಿ ಭಟ್‌, ತ್ರಿಶಾ ಹೆಗ್ಡೆ ಹಾಗೂ ಉನ್ನತಿ ಬಿಷ್ಟ್‌ ಕೂಡ 32ರ ಸುತ್ತಿಗೆ ಪ್ರವೇಶಿಸಿದರು.

ಅದಿತಿ ಅವರು ಸ್ಪೇನ್ನ ಲೌರಾ ಸಾಲಿಸ್‌ ಎದುರು 21–16, 21–10ರಿಂದ, ತ್ರಿಶಾ, ಮಲೇಷ್ಯಾದ ಜಿಂಗ್‌ ಯಿ ತಾನ್‌ ವಿರುದ್ಧ 21–13, 21–12ರಿಂದಲೂ, ಉನ್ನತಿ ಅವರು ಜೆಕ್‌ ರಿಪಬ್ಲಿಕ್‌ನ ಕ್ಯಾಟರಿನಾ ಮೈಕಲೊವಾ ಮೇಲೆ 21–17, 21–16ರಿಂದಲೂ ಜಯ ಕಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.