ADVERTISEMENT

ಟಿಟಿ: ಸನಿಲ್, ಶರತ್‌ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 20:01 IST
Last Updated 22 ಸೆಪ್ಟೆಂಬರ್ 2022, 20:01 IST
ಶರತ್‌ ಕಮಲ್‌
ಶರತ್‌ ಕಮಲ್‌   

ಸೂರತ್ (ಪಿಟಿಐ): ಸನಿಲ್‌ ಶೆಟ್ಟಿ, ಜಿ.ಸತ್ಯನ್‌ ಮತ್ತು ಅಚಂತಾ ಶರತ್‌ ಕಮಲ್‌ ಅವರು ರಾಷ್ಟ್ರೀಯ ಕ್ರೀಡಾಕೂಟದ ಟೇಬಲ್‌ ಟೆನಿಸ್‌ ಟೂರ್ನಿಯ ಮೂರನೇ ಸುತ್ತು ಪ್ರವೇಶಿಸಿದರು.

ಪುರುಷರ ಸಿಂಗಲ್ಸ್‌ ವಿಭಾಗದ ಸ್ಪರ್ಧೆಯಲ್ಲಿ ಮೂರನೇ ಶ್ರೇಯಾಂಕದ ಸನಿಲ್‌ 11-5, 7-11, 9-11, 11-8, 11-9, 7-11, 11-9 ರಲ್ಲಿ ಉತ್ತರ ಪ್ರದೇಶದ ದಿವ್ಯಾನ್ಶ್‌ ಶ್ರೀವಾಸ್ತವ ಎದುರು ಪ್ರಯಾಸದಿಂದ ಗೆದ್ದರು.

ಪ್ರಬಲ ಪೈಪೋಟಿ ನಡೆದ ಪಂದ್ಯದ ನಿರ್ಣಾಯಕ ಗೇಮ್‌ನಲ್ಲಿ 9–9 ರಲ್ಲಿ ಸಮಬಲ ಕಂಡುಬಂದಿತು. ಒತ್ತಡವನ್ನು ಮೆಟ್ಟಿನಿಂತ ಸನಿಲ್‌ ಸತತ ಎರಡು ಪಾಯಿಂಟ್‌ ಕಲೆಹಾಕಿ ಗೆಲುವು ಒಲಿಸಿಕೊಂಡರು.

ADVERTISEMENT

ಸತ್ಯನ್‌ 13-11, 11-6, 11-4, 11-5 ರಲ್ಲಿ ಹರಿಯಾಣದ ವೆಸ್ಲಿ ರೊಸೆರಿಯೊ ವಿರುದ್ದ ಗೆದ್ದರೆ, ಶರತ್‌ 11-9, 11-6, 11-6, 17-15 ರಲ್ಲಿ ಮಹಾರಾಷ್ಟ್ರದ ರವೀಂದ್ರ ಕೋಟ್ಯಾನ್‌ ಅವರನ್ನು ಮಣಿಸಿದರು.

ಸ್ಥಳೀಯ ಪ್ರತಿಭೆಗಳಾದ ಹರ್ಮೀತ್‌ ದೇಸಾಯಿ ಮತ್ತು ಮಾನವ್‌ ಠಕ್ಕರ್‌ ಅವರೂ ಮೂರನೇ ಸುತ್ತು ಪ್ರವೇಶಿಸಿದರು.

ಮಾನವ್‌ 11-5, 11-6, 11-6, 14-16, 11-6 ರಲ್ಲಿ ಉತ್ತರ ಪ್ರದೇಶದ ಸಾರ್ತ್‌ ಮಿಶ್ರ ಎದುರೂ, ದೇಸಾಯಿ 11-4, 11-5, 11-6, 11-8 ರಲ್ಲಿ ತೆಲಂಗಾಣದ ಮೊಹಮ್ಮದ್‌ ಅಲಿ ವಿರುದ್ಧವೂ ಗೆದ್ದರು.

ಮಿಶ್ರ ಡಬಲ್ಸ್‌ನಲ್ಲಿ ಮಾನವ್‌ ಮತ್ತು ಫಿಲ್ಜಾ ಫಾತಿಮಾ ಖಾದ್ರಿ ಅವರು ಅಗ್ರಶ್ರೇಯಾಂಕದ ಸನಿಲ್‌ ಶೆಟ್ಟಿ ಹಾಗೂ ರೀತ್‌ಶ್ರಿಯಾ ಟೆನಿಸನ್‌ ಅವರಿಗೆ ಆಘಾತ ನೀಡಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.