ADVERTISEMENT

ಟೋಕಿಯೊ ಒಲಿಂಪಿಕ್ಸ್ ಬಜೆಟ್‌: ಮೊತ್ತದಲ್ಲಿ ಇಲ್ಲ ಬದಲಾವಣೆ

ಏಜೆನ್ಸೀಸ್
Published 21 ಡಿಸೆಂಬರ್ 2018, 19:12 IST
Last Updated 21 ಡಿಸೆಂಬರ್ 2018, 19:12 IST

ಟೋಕಿಯೊ: 2020ರ ಒಲಿಂಪಿಕ್ಸ್‌ ಆಯೋಜನಾ ಸಮಿತಿಯು ಕೂಟಕ್ಕೆ ವೆಚ್ಚ ಮಾಡುವ ಮೊತ್ತದ ಮಾಹಿತಿಯನ್ನು ಒದಗಿಸಿದೆ. ವೆಚ್ಚ ಹೆಚ್ಚಿಸದೇ ಇರಲು ಒತ್ತಡಹೆಚ್ಚಿದ ಕಾರಣ, ಈ ಹಿಂದೆ ನೀಡಿದ ಮೊತ್ತದಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ.

ಕಳೆದ ವರ್ಷ ₹ 84 ಸಾವಿರ ಕೋಟಿ ಮೊತ್ತದ ಬಜೆಟ್‌ ಮಂಡಿಸಲಾಗಿತ್ತು. ಅತ್ಯಾಧುನಿಕ ಕ್ರೀಡಾಂಗಣ ನಿರ್ಮಾಣದ ವೆಚ್ಚವನ್ನೂ ಇದರಲ್ಲಿಸೇರಿಸಲಾಗಿತ್ತು. ವೆಚ್ಚವನ್ನು ಹೆಚ್ಚಿಸಿ ಟೋಕಿಯೊದಲ್ಲಿ ಮೂಲಸೌಲಭ್ಯ ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿತ್ತು. ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಆದ್ದರಿಂದ ವೆಚ್ಚ ಹೆಚ್ಚಿಸದೇ ಇರಲು ಆಯೋಜಕರು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT