ADVERTISEMENT

ಪವಡಿಸಲೂ ಪರಿಸರಸ್ನೇಹಿ ವ್ಯವಸ್ಥೆ

ಒಲಿಂಪಿಕ್ಸ್‌: ಕ್ರೀಡಾಗ್ರಾಮದಲ್ಲಿ 18,000 ಮಂಚಗಳ ವ್ಯವಸ್ಥೆ

ರಾಯಿಟರ್ಸ್
Published 9 ಜನವರಿ 2020, 20:00 IST
Last Updated 9 ಜನವರಿ 2020, 20:00 IST
ಒಲಿಂಪಿಕ್ಸ್
ಒಲಿಂಪಿಕ್ಸ್   

ಟೋಕಿಯೊ: ಪುನರ್ಬಳಕೆ ಮಾಡಬಹುದಾದ ಕಾರ್ಡ್‌ಬೋರ್ಡ್‌ ಚೌಕಟ್ಟನ್ನು ಹೊಂದಿ ರುವ ಮಂಚಗಳು, ಪಾಲಿ ಇಥಲೀನ್‌ ಪದಾರ್ಥದಿಂದ ತಯಾರಿಸಿದ ಹಾಸಿಗೆ ಗಳು...ಟೋಕಿಯೊ ಒಲಿಂಪಿಕ್ಸ್‌ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅಥ್ಲೀಟುಗಳು ಇವುಗಳ ಮೇಲೆ ಪವಡಿಸ ಬೇಕಾಗುತ್ತದೆ.

ಒಲಿಂಪಿಕ್‌ ಕೂಟದ ನಂತರ ಈ ಹಾಸಿಗೆಗಳನ್ನು ಪ್ಲಾಸ್ಟಿಕ್‌ ಉತ್ಪನ್ನಗಳನ್ನು ತಯಾರಿಕೆಗೆ ಬಳಸಲಾಗುವುದು. ನಿದ್ರಿಸುವುದಕ್ಕೆ ಪರಿಸರಪ್ರಜ್ಞೆಯಿಂದ ಕೂಡಿದ ಈ ಏರ್ಪಾಡುಗಳನ್ನು ಟೋಕಿಯೊ 2020 ಕೇಂದ್ರ ಕಚೇರಿ ಯಲ್ಲಿ ಗುರುವಾರ ಮಾಧ್ಯಮದ ಮುಂದೆ ಪ್ರದರ್ಶಿಸಲಾಯಿತು.

ಒಲಿಂಪಿಕ್‌ ಮತ್ತು ಪ್ಯಾರಾಲಿಂಪಿಕ್‌ ಕ್ರೀಡಾಗ್ರಾಮಗಳ ವಸತಿ ವಿಭಾಗದ ನಿರ್ಮಾಣ ಕಾರ್ಯ ಡಿಸೆಂಬರ್‌ನಲ್ಲೇ ಅಂತ್ಯಗೊಂಡಿದೆ. ಆದರೂ ಅಣಕು ಅಪಾರ್ಟ್‌ಮೆಂಟ್‌ನಲ್ಲಿ ಮಂಚ–ಹಾಸಿಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಇವುಗಳ ಉದ್ದ 2.10 ಮೀಟರ್‌. 200 ಕೆ.ಜಿ. ಭಾರ ತಾಳಿಕೊಳ್ಳುವ ಸಾಮರ್ಥ್ಯದ ಇವು ಗಳನ್ನುಏರ್‌ವೀವ್‌ ಸಂಸ್ಥೆ ತಯಾರಿಸಿದೆ.

ADVERTISEMENT

ನಗರದ ಹೆಗ್ಗುರುತಾದ ರೇನ್‌ಬೊ ಬ್ರಿಜ್‌ ಕಾಣುವಂತಿರುವ ಕ್ರೀಡಾಗ್ರಾಮ ದಲ್ಲಿ 18,000 ಮಂಚಗಳ ವ್ಯವಸ್ಥೆ ಅಗತ್ಯವಿದೆ. ಒಲಿಂಪಿಕ್ಸ್‌ ಈ ವರ್ಷದ ಜುಲೈ 24ರಿಂದ ನಡೆಯಲಿದೆ. ಪ್ಯಾರಾ ಲಿಂಪಿಕ್‌ ಕ್ರೀಡಾಪಟುಗಳಿಗೆ ಕೇವಲ 8,000 ಮಂಚಗಳು ಸಾಕಾಗಲಿವೆ.

ಕ್ರೀಡಾಕೂಟದ ನಂತರ ಕ್ರೀಡಾಗ್ರಾಮದ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಗೆ ಇಡಲಾಗುವುದು. ಈ ಅಪಾರ್ಟ್‌ಮೆಂಟ್‌ಗಳ ಬೆಲೆ ₹ 32 ಕೋಟಿ ಆಸುಪಾಸಿನಲ್ಲಿರಲಿದೆ.

ಕ್ರೀಡಾಕೂಟದಿಂದ ಇಂಗಾಲದ ಪ್ರಮಾಣ ಕಡಿಮೆ ಮಾಡಲು ಸಂಘ ಟಕರು ಶ್ರಮ ಹಾಕುತ್ತಿದ್ದಾರೆ ಎನ್ನುತ್ತಾರೆ ನಗರ ಕಾರ್ಯಪಡೆಯ ಪರಿಸರವಿಜ್ಞಾನ ಸಂಶೋಧಕ ಜುನಿಚಿ ಫುಜಿನೊ.

62 ಲಕ್ಷ ಮೊಬೈಲ್‌ಗಳು ಸೇರಿ ಗ್ರಾಹಕರು ಬಳಸಿದ್ದ ಎಲೆ ಕ್ಟ್ರಾನಿಕ್‌ ಉತ್ಪನ್ನಗಳನ್ನು ಪುನ ರ್ಬಳಕೆ ಮಾಡಿ ಪದಕಗಳನ್ನು ತಯಾರಿಸಲಾಗಿದೆ. ಅಲ್ಯೂಮಿನಿಯಂ ತ್ಯಾಜ್ಯದಿಂದ ಒಲಿಂಪಿಕ್‌ ಜ್ಯೋತಿ ತಯಾರಿಸಲಾಗಿದೆ. ಗೃಹೋಪಯೋಗಿ ವಸ್ತುಗಳನ್ನು ಪುನರ್ಬಳಕೆ ಮಾಡಿ ಪೋಡಿಯಂಗಳನ್ನು ತಯಾರಿಸಲಾಗಿದೆ. ನವೀಕರಿಸಬಹುದಾದ ಇಂಧನ ಬಳಸಿ ಕ್ರೀಡಾಕೂಟಕ್ಕೆ ವಿದ್ಯುಚ್ಛಕ್ತಿ ಸರಬರಾಜು ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.