ADVERTISEMENT

ಏಷ್ಯನ್‌ ಟಿಟಿ: ಪಾಯಸ್‌ಗೆ ಬೆಳ್ಳಿ

ಪಿಟಿಐ
Published 7 ಸೆಪ್ಟೆಂಬರ್ 2019, 20:38 IST
Last Updated 7 ಸೆಪ್ಟೆಂಬರ್ 2019, 20:38 IST

ನವದೆಹಲಿ: ಭಾರತದ ಪಾಯಸ್‌ ಜೈನ್‌ ಏಷ್ಯನ್‌ ಜೂನಿಯರ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಬೆಳ್ಳಿ ಗೆದ್ದುಕೊಂಡರು. ಮಂಗೋಲಿಯಾದ ಉಲಾನ್‌ಬಾತರ್‌ನಲ್ಲಿ ನಡೆದ ಟೂರ್ನಿಯ ಜೂನಿಯರ್‌ ಮತ್ತು ಕೆಡೆಟ್‌ ವಿಭಾಗದ ಫೈನಲ್‌ನಲ್ಲಿ ಅವರು ಚೀನಾದ ಯುವಾನ್ಯೂ ಚೆನ್‌ ವಿರುದ್ಧ ಸೋತರು.

ವಿಶ್ವದ ಮೊದಲ ರ‍್ಯಾಂಕಿನ ಆಟಗಾರನ ವಿರುದ್ಧ ದೆಹಲಿಯ ಹುಡುಗ 11–13, 6–11, 8–11, 5–11ರಿಂದ ಮಣಿದರು. 20 ನಿಮಿಷಗಳಿಗಿಂತ ಕಡಿಮೆ ಸಮಯದಲ್ಲೇ ಹಣಾಹಣಿ ಮುಗಿಯಿತು.

ಮೊದಲ ಗೇಮ್‌ನ್ನು ಗೆಲ್ಲುವ ಅವಕಾಶ ಜೈನ್‌ಗೆ ಇತ್ತು. ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದ ಅವರು ಬಳಿಕ ಮುನ್ನಡೆ ಕಂಡುಕೊಂಡಿದ್ದರು. ಆದರೆ ಭಾರತದ ಆಟಗಾರ ಎಸಗಿದ ಹಲವು ತಪ್ಪುಗಳು ಚೆನ್‌ ಅವರಿಗೆ ವರವಾದವು. ನಂತರ ಏಕಪಕ್ಷೀಯವಾಗಿ ಅವರು ಪಂದ್ಯ ವಶಪಡಿಸಿಕೊಂಡರು.

ADVERTISEMENT

ಭಾರತದ ಜೂನಿಯರ್‌ ಬಾಲಕರ ತಂಡವೂ ಟೂರ್ನಿಯಲ್ಲಿ ಬೆಳ್ಳಿ ಪದಕ ತನ್ನದಾಗಿಸಿಕೊಂಡಿತು.

ಜೈನ್‌ ಗೆದ್ದ ಬೆಳ್ಳಿ ಪದಕ ಅವರಿಗೆ ವಿಶ್ವ ಕೆಡೆಟ್‌ ಚಾಲೆಂಜ್‌ನಲ್ಲಿ ಪಾಲ್ಗೊಳ್ಳುವ ಏಷ್ಯಾ ತಂಡದಲ್ಲಿ ಸ್ಥಾನ ಕಲ್ಪಿಸಿದೆ. ಪೋಲೆಂಡ್‌ನಲ್ಲಿ ಅಕ್ಟೋಬರ್‌ನಲ್ಲಿ ಈ ಟೂರ್ನಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.