ADVERTISEMENT

ಟೇಬಲ್ ಟೆನಿಸ್: ಯು ಮುಂಬಾ ತಂಡಕ್ಕೆ ಯುಟಿಟಿ ಕಿರೀಟ

ಪಿಟಿಐ
Published 15 ಜೂನ್ 2025, 20:29 IST
Last Updated 15 ಜೂನ್ 2025, 20:29 IST
ಪ್ರಶಸ್ತಿಯೊಂದಿಗೆ ಯು ಮುಂಬಾ ತಂಡ
ಪ್ರಶಸ್ತಿಯೊಂದಿಗೆ ಯು ಮುಂಬಾ ತಂಡ   

ಅಮಹದಾಬಾದ್: ಯು ಮುಂಬಾ ತಂಡವು ಅಲ್ಟಿಮೇಟ್ ಟೇಬಲ್ ಟೆನಿಸ್ (ಯುಟಿಟಿ) ಟೂರ್ನಿಯ ಆರನೇ ಆವೃತ್ತಿಯ ಕಿರೀಟವನ್ನು ಮುಡಿಗೇರಿಸಿಕೊಂಡಿತು.

ಇಲ್ಲಿನ ಇ.ಕೆ.ಎ. ಅರೆನಾದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಮುಂಬಾ ತಂಡವು 8-4 ಅಂತರದಿಂದ ಜೈಪುರ ಪೇಟ್ರಿಯಾಟ್ಸ್ ತಂಡವನ್ನು ಸೋಲಿಸಿ, ತನ್ನ ಚೊಚ್ಚಲ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಚಾಂಪಿಯನ್ ಆಗಿ ಹೊರಹೊಮ್ಮಿದ ಯು ಮುಂಬಾ ತಂಡವು ₹ 60 ಲಕ್ಷ  ಮತ್ತು ರನ್ನರ್ ಅಪ್ ಜೈಪುರ ತಂಡ ₹40 ಲಕ್ಷ ಬಹುಮಾನ ತನ್ನದಾಗಿಸಿಕೊಂಡಿತು. 

ADVERTISEMENT

ಸೆಮಿಫೈನಲ್‌ ತಲುಪಿದ್ದ ದಬಾಂಗ್ ಡೆಲ್ಲಿ ಟಿಟಿಸಿ ಮತ್ತು ಗೋವಾರ ಚಾಲೆಂಜರ್ಸ್ ತಂಡಗಳು ತಲಾ ₹ 17.5 ಲಕ್ಷ ಪಡೆದವು. ಹಾಲಿ ಆವೃತ್ತಿಯಲ್ಲಿ ಒಟ್ಟು ಎಂಟು ತಂಡಗಳು ಪ್ರಶಸ್ತಿಗೆ ಸೆಣಸಾಟ ನಡೆಸಿದ್ದವು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.