ಬೆಂಗಳೂರು: ಹರಿಯಾಣದ ಗುರುಗ್ರಾಮದಲ್ಲಿ ಶನಿವಾರ ಮುಕ್ತಾಯಗೊಂಡ 9 ವರ್ಷದೊಳಗಿನವರ ರಾಷ್ಟ್ರೀಯ ಚೆಸ್ ಚಾಂಪಿಯನ್‌ಷಿಪ್‌ನ ಓಪನ್ ವಿಭಾಗದಲ್ಲಿ ಕರ್ನಾಟಕದ ಆದ್ವಿಕ್ ಅಭಿನವ್ ಕೃಷ್ಣ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ. ಬಾಲಕಿಯರ ವಿಭಾಗದಲ್ಲಿ ನಕ್ಷತ್ರಾ ಗುಮುದವೆಲ್ಲಿ ಕೂಡ ರನ್ನರ್ ಅಪ್ ಆಗಿದ್ದಾರೆ.
ಓಪನ್ ವಿಭಾಗದಲ್ಲಿ ಒಡಿಶಾದ ಸಾತ್ವಿಕ್ ಸ್ವೇನ್ 11 ಸುತ್ತುಗಳ ನಂತರ 10 ಪಾಯಿಂಟ್ಸ್ ಗಳಿಸಿ ಮೊದಲಿಗನಾದರೆ, ಆದ್ವಿಕ್ 9.5 ಪಾಯಿಂಟ್ಸ್ ಕಲೆಹಾಕಿ ಎರಡನೇ ಸ್ಥಾನ ಪಡೆದಿದ್ದಾರೆ. ಅದ್ವಿಕ್ 9ನೇ ಶ್ರೇಯಾಂಕ ಪಡೆದಿದ್ದರು. ಕರ್ನಾಟಕದ ಮತ್ತೊಬ್ಬ ಆಟಗಾರ ಅಯಾನ್ ಫುಟಾಣೆ (8.5 ಪಾಯಿಂಟ್ಸ್) ನಾಲ್ಕನೇ ಸ್ಥಾನ ಗಳಿಸಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಮಹಾರಾಷ್ಟ್ರದ ಗಿರಿಶಾ ಪ್ರಸನ್ನ ಪೈ (10.5) ಮೊದಲ ಸ್ಥಾನ ಪಡೆದರೆ, ನಕ್ಷತ್ರಾ (9.5) ಎರಡನೇ ಸ್ಥಾನ ಗಳಿಸಿದರು.
ನಕ್ಷತ್ರಾ, ಆದ್ವಿಕ್ ಮತ್ತು ಅಯಾನ್ ಬೆಂಗಳೂರು ನಗರದ ಚೆಸ್ ಪಟುಗಳಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.