ADVERTISEMENT

ಫೈನಲ್‌ಗೆ ವಿನೇಶಾ ಪೋಗಟ್‌

ಪೋಲೆಂಡ್ ಓಪನ್ ಕುಸ್ತಿ ಟೂರ್ನಿ: ಹಿಂದೆ ಸರಿದ ಅನ್ಶು

ಪಿಟಿಐ
Published 11 ಜೂನ್ 2021, 12:39 IST
Last Updated 11 ಜೂನ್ 2021, 12:39 IST
ವಿನೇಶಾ ಪೋಗಟ್‌– ಪಿಟಿಐ ಸಂಗ್ರಹ ಚಿತ್ರ
ವಿನೇಶಾ ಪೋಗಟ್‌– ಪಿಟಿಐ ಸಂಗ್ರಹ ಚಿತ್ರ   

ವಾರ್ಸಾ: ಅಮೋಘ ಸಾಮರ್ಥ್ಯ ತೋರಿದ ಭಾರತದ ವಿನೇಶಾ ಪೋಗಟ್ ಅವರು ಪೋಲೆಂಡ್ ಓಪನ್ ಕುಸ್ತಿ ಟೂರ್ನಿಯಲ್ಲಿ ಫೈನಲ್ ತಲುಪಿದ್ದಾರೆ. ಮಹಿಳೆಯರ 53 ಕೆಜಿ ವಿಭಾಗದಲ್ಲಿ ಶುಕ್ರವಾರ ಅವರು ಚಿನ್ನದ ಪದಕದ ಸುತ್ತಿಗೆ ಪ್ರವೇಶಿಸುವ ಮೂಲಕ ಟೋಕಿಯೊ ಒಲಿಂಪಿಕ್ಸ್‌ಗೆ ಭರ್ಜರಿ ಸಿದ್ಧತೆ ನಡೆಸಿದರು.

ಮೊದಲ ಬೌಟ್‌ನಲ್ಲಿ ವಿನೇಶಾ, 2019ರ ವಿಶ್ವಕಪ್ ಕಂಚಿನ ಪ‍ದಕ ವಿಜೇತೆ ರಷ್ಯಾದ ಏಕಟೆರಿನಾ ಪೊಲೆಶ್ಚುಕ್ ಅವರನ್ನು 6–2ರಿಂದ ಮಣಿಸಿದರು. ಬಳಿಕ ಅಮೆರಿಕದ ಆ್ಯಮಿ ಆ್ಯನ್ ಫರ್ನ್‌ಸೈಡ್‌ ಎದುರು ಸುಲಭ ಜಯ ಸಂಪಾದಿಸಿದರು.

ಇಲ್ಲಿ ಫೈನಲ್ ತಲುಪುವುದರೊಂದಿಗೆ 26 ವರ್ಷದ ವಿನೇಶಾ, ಈ ಋತುವಿನಲ್ಲಿ ಮೂರನೇ ಚಿನ್ನದ ಪದಕಕ್ಕಾಗಿ ಸೆಣಸಲಿದ್ದಾರೆ. ಮಾರ್ಚ್‌ನಲ್ಲಿ ನಡೆದ ಮಟ್ಟೆಯೊ ಪೆಲಿಕೊನ್ ಹಾಗೂ ಏಪ್ರಿಲ್‌ನಲ್ಲಿ ನಡೆದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಅವರು ಅಗ್ರಸ್ಥಾನ ಗಳಿಸಿದ್ದರು.

ADVERTISEMENT

ಪುರುಷರ 61 ಕೆಜಿ ವಿಭಾಗದಲ್ಲಿ ರವಿ ದಹಿಯಾ ಬುಧವಾರ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.

ಹಿಂದೆ ಸರಿದ ಅನ್ಶು ಮಲಿಕ್‌: ಇದೇ ಟೂರ್ನಿಯ 57 ಕೆಜಿ ವಿಭಾಗದಲ್ಲಿ ಸ್ಪರ್ಧಿಸಬೇಕಿದ್ದ ಅನ್ಶು ಮಲಿಕ್ ಅವರು ಜ್ವರದ ಕಾರಣ ಹಿಂದೆ ಸರಿದರು. ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಅನ್ಶು ಅವರಿಗೆ ಕೋವಿಡ್‌ ಪರೀಕ್ಷೆ ಮಾಡಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಅವರಿಗೆ ಟೂರ್ನಿಯಿಂದ ಹಿಂದೆ ಸರಿಯಲು ಸೂಚಿಸಲಾಗಿದೆ.

ಸದ್ಯ ಅವರು ಪ್ರತ್ಯೇಕವಾಸದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.