ADVERTISEMENT

ಮಹಿಳೆಯರ ಕಾರು ರ‍್ಯಾಲಿ: ಆಶಿಮಾ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 16:10 IST
Last Updated 18 ಜನವರಿ 2019, 16:10 IST
ಮೊದಲ ದಿನದ ಸ್ಪರ್ಧೆಯಲ್ಲಿ ಹಾಲಿ ಚಾಂಪಿಯನ್ ಗೀತಾ ವಾಧ್ವಾ ಅವರ ಕಾರನ್ನು ಹಿಂದಿಕ್ಕಿ ಮುನ್ನುಗ್ಗಿದ ಪ್ರಫುಲ್ಲ ಮತ್ತು ಸಂಧ್ಯಾ ಜೋಡಿಯ ಕಾರು
ಮೊದಲ ದಿನದ ಸ್ಪರ್ಧೆಯಲ್ಲಿ ಹಾಲಿ ಚಾಂಪಿಯನ್ ಗೀತಾ ವಾಧ್ವಾ ಅವರ ಕಾರನ್ನು ಹಿಂದಿಕ್ಕಿ ಮುನ್ನುಗ್ಗಿದ ಪ್ರಫುಲ್ಲ ಮತ್ತು ಸಂಧ್ಯಾ ಜೋಡಿಯ ಕಾರು   

ಬೆಂಗಳೂರು: ಆಶಿಮಾ ದುಗ್ಗಲ್ ಮತ್ತು ಅಮೃತಾ ಶೇರ್ಗಿಲ್‌ ಅವರು ಮಹಿಳೆಯರ ‘ದಿವಸ್ ಆನ್ ವ್ಹೀಲ್ಸ್‌’ ಕಾರು ರ‍್ಯಾಲಿಯ ಮೊದಲ ದಿನ ಮುನ್ನಡೆ ಸಾಧಿಸಿದರು. ಶುಕ್ರವಾರ ಬೆಳಿಗ್ಗೆ ಬೆಂಗಳೂರಿನಿಂದ ಹೊರಟ ರ‍್ಯಾಲಿ ಸಂಜೆ ಚಿಕ್ಕಮಗಳೂರು ತಲು‍ಪಿತು.

ನಾವಿಗೇಟರ್‌ ಅಮೃತಾ ಶೇರ್ಗಿಲ್ ಅವರೊಂದಿಗೆ ಕಾರು ಚಲಾಯಿಸಿದ 35 ವರ್ಷದ ಆಶಿಮಾ 300 ಕಿಲೊಮೀಟರ್‌ ದೂರವನ್ನು ಕ್ರಮಿಸಿ 6.50 ‍ಪೆನಾಲ್ಟಿ ಪಾಯಿಂಟ್ಸ್ ಕಲೆ ಹಾಕಿದರು. ನೀಲೊಫರ್ ಇಬ್ರಾಹಿಂ ಅವರೊಂದಿಗೆ ಕಾರು ಚಲಾಯಿಸಿದ ಶೋಭಾ ರವಿ ಮತ್ತು ಸಂಧ್ಯಾ ಅವರ ನೆರವು ಪಡೆದ ಕೆ.ಎಸ್.ಪ್ರಫುಲ್ಲ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಶೋಭಾರ 9.30 ಪೆನಾಲ್ಟಿ ಪಾಯಿಂಟ್ಸ್ ಗಳಿಸಿದರೆ ಪ್ರಫುಲ್ಲ 9.36 ಪೆನಾಲ್ಟಿ ಪಾಯಿಂಟ್ಸ್ ಗಳಿಸಿದರು.

ಹಾಲಿ ಚಾಂಪಿಯನ್‌ ಗೀತಾ ವಾಧ್ವಾ ಮೊದಲ ದಿನ ಎಂಟನೇ ಸ್ಥಾನ ಗಳಿಸಿ ನಿರಾಸೆಗೆ ಒಳಗಾದರು. ಶನಿವಾರ ಬೆಳಿಗ್ಗೆ ರ‍್ಯಾಲಿ ಮುಂದುವರಿಯಲಿದ್ದು ಕೊಡಗಿನ ಪಾಲಿಬೆಟ್ಟದಲ್ಲಿ ಮುಕ್ತಾಯಗೊಳ್ಳಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.