ಹಾಕಿ
ಭುವನೇಶ್ವರ (ಪಿಟಿಐ): ಭಾರತ ಮಹಿಳಾ ಹಾಕಿ ತಂಡವು ಎಫ್‌ಐಎಚ್ ಪ್ರೊ ಲೀಗ್ ಪಂದ್ಯದಲ್ಲಿ ಬುಧವಾರ ಆಸ್ಟ್ರೇಲಿಯಾ ವಿರುದ್ಧ 0–3ರಿಂದ ಪರಾಭವಗೊಂಡಿತು. ಆತಿಥೇಯ ತಂಡಕ್ಕೆ ಇದು ಹ್ಯಾಟ್ರಿಕ್ ಸೋಲು.
ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕಿ ಗ್ರೇಸ್ ಸ್ಟೀವರ್ಟ್ (19ನೇ ನಿಮಿಷ), ಟಾಟಮ್ ಸ್ಟೀವರ್ಟ್ (23ನೇ ನಿ) ಮತ್ತು ಕೈಟ್ಲಿನ್ ನಾಬ್ಸ್ (55ನೇ ನಿ.) ಗೋಲು ಗಳಿಸಿದರು. ಭಾರತ ತಂಡವು ಶುಕ್ರವಾರ ಅಮೆರಿಕ ವಿರುದ್ಧ ಸೆಣಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.