ADVERTISEMENT

ಮಹಿಳಾ ಹಾಕಿ: ಭಾರತಕ್ಕೆ ಸೋಲು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2024, 4:45 IST
Last Updated 5 ಫೆಬ್ರುವರಿ 2024, 4:45 IST
<div class="paragraphs"><p> ಹಾಕಿ </p></div>

ಹಾಕಿ

   

ಭುವನೇಶ್ವರ : ಭಾರತ ಮಹಿಳಾ ಹಾಕಿ ತಂಡವು ಭಾನುವಾರ ಇಲ್ಲಿ ನಡೆದ ಎಫ್‌ಐಎಚ್ ಪ್ರೊ ಲೀಗ್‌ನಲ್ಲಿ 1-3 ಗೋಲುಗಳಿಂದ ನೆದರ್ಲೆಂಡ್ಸ್ ವಿರುದ್ಧ ಸೋಲು ಅನುಭವಿಸಿತು.

ಭಾರತಕ್ಕೆ ಇದು ಸತತ ಎರಡನೇ ಸೋಲು. ಶನಿವಾರ ಚೀನಾ ವಿರುದ್ಧ ಪರಾಭವಗೊಂಡಿತ್ತು.

ADVERTISEMENT

ಈ ಪಂದ್ಯದಲ್ಲಿ ಆರು ಪೆನಾಲ್ಟಿ ಕಾರ್ನರ್‌ ಅವಕಾಶಗಳು ಲಭಿಸಿದರೂ ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ಭಾರತದ ಆಟಗಾರ್ತಿಯರು ವಿಫಲವಾದರು. ಭಾರತದ ಪರ ನವನೀತ್ ಕೌರ್ ಏಕೈಕ ಗೋಲು ದಾಖಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.