ADVERTISEMENT

ಬ್ಯಾಸ್ಕೆಟ್‌ಬಾಲ್‌: ಎಂಟರ ಘಟ್ಟಕ್ಕೆ ಅಮೆರಿಕ

ಗ್ರೀಸ್‌ ವಿರುದ್ಧ ಜಯ

ಏಜೆನ್ಸೀಸ್
Published 7 ಸೆಪ್ಟೆಂಬರ್ 2019, 20:34 IST
Last Updated 7 ಸೆಪ್ಟೆಂಬರ್ 2019, 20:34 IST

ಶೆನ್‌ಝೆನ್‌: ಕಳೆದ ಬಾರಿಯ ಚಾಂಪಿಯನ್‌ ಅಮೆರಿಕ ತಂಡ ಶನಿವಾರ 69–53 ಪಾಯಿಂಟ್‌ಗಳಿಂದ ಗ್ರೀಸ್‌ ತಂಡವನ್ನು ಸೋಲಿಸಿ ಬ್ಯಾಸ್ಕೆಟ್‌ಬಾಲ್‌ ವಿಶ್ವಕಪ್‌ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿತು.

ಎನ್‌ಬಿಎ ಆಟಗಾರ ಗಿಯಾನಿಸ್‌ ಆಂಟೆಟೊಕೊನ್‌ಪೊ ಅವರನ್ನು ನಿಯಂತ್ರಿಸಿದರೆ, ಗ್ರೀಸ್‌ ತಂಡವನ್ನೂ ಮಣಿಸಬಹುದು ಎಂಬ ಲೆಕ್ಕಾಚಾರದಲ್ಲೇ ಆಡಿದ ಅಮೆರಿಕ ಯಶಸ್ಸನ್ನೂ ಕಂಡಿತು. 24 ವರ್ಷದ ಗಿಯಾನಿಸ್‌ ಹೆಚ್ಚು ದಾಳಿ ನಡೆಸದಂತೆ ಮೂವರು ಆಟಗಾರರು ಸರ್ಪಗಾವಲು ಹಾಕಿದರು.

ಆಸ್ಟ್ರೇಲಿಯಾ ಮತ್ತು ಫ್ರಾನ್ಸ್‌ ತಂಡಗಳೂ ಸೆಮಿಫೈನಲ್‌ ಪ್ರವೇಶಿಸಿವೆ. ಆದರೆ ಗ್ರೀಸ್‌ ಬಾಗಿಲು ಪೂರ್ಣ ಮುಚ್ಚಿಲ್ಲ. ಸೋಮವಾರ ಜೆಕ್‌ ರಿಪಬ್ಲಿಕ್‌ ವಿರುದ್ಧ ದೊಡ್ಡ ಅಂತರದ ಜಯಗಳಿಸಿದಲ್ಲಿ ಅದೂ ಎಂಟರ ಘಟ್ಟ ತಲುಪಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.